ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರ ಗಣನೀಯ ಪ್ರಮಾಣದಲ್ಲಿ ನಡೆಯುತ್ತಿದೆ, ಇದರ. ಪರಿಣಾಮ ಹೊಸ ವಾಹನಗಳು ಒಂದಾದರ ಮೇಲೊಂದು ಬಿಡುಗಡೆಯಾಗುತ್ತಿದೆ.
ಟಾಟಾ ಮೋಟಾರ್ಸ್ ಹೊಸ ರೇಂಜ್‌ನಲ್ಲಿ ನೆಕ್ಸಾನ್ ಇವಿಯನ್ನು ಮೇ 11ರಂದು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನಬೇಕೋ ಬೇಡವೋ..…?
ಈ ಎಲೆಕ್ಟ್ರಿಕ್ ವಾಹನವು ದೊಡ್ಡ ಬ್ಯಾಟರಿ ಪ್ಯಾಕ್ ಹೊಂದಿದ್ದು, ಒಂದು ಪೂರ್ಣ ಚಾರ್ಜ್‌ನಲ್ಲಿ 400 ಕಿಮೀ ವ್ಯಾಪ್ತಿ ಚಲಿಸುವ ಶಕ್ತಿ ಹೊಂದಿದೆ. ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಎಂಜಿ ಆಸ್ಟರ್ ಇತರರ ಸ್ಪರ್ಧೆಗೆ ಪೈಪೋಟಿ ನೀಡಲು ಹೆಚ್ಚುವರಿ ಅಂಶಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.
ದೀರ್ಘ ರೇಂಜ್‌ನ ಈ ನೆಕ್ಸಾನ್ ಇವಿ 40ಕೆಡಬ್ಲ್ಯುಹೆಚ್ ಬ್ಯಾಟರಿ ಪ್ಯಾಕ್ ಹೊಂದಿರಲಿದ್ದು, ಇದು ಪ್ರಸ್ತುತ ಮಾದರಿಯ ಬ್ಯಾಟರಿ ಯುನಿಟ್‌ಗಿಂತ ಶೇ.30 ದೊಡ್ಡದಾಗಿರುತ್ತದೆ. ಇನ್ನು ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು 10 ಗಂಟೆ ತೆಗೆದುಕೊಳ್ಳುತ್ತದೆ. ಬ್ಯಾಟರಿ ಹೆಚ್ಚಳದಿಂದ ವಿನ್ಯಾಸದಲ್ಲೂ ಬದಲಾವಣೆ ಮಾಡಲಾಗಿದೆ ಎಂಬ ಮಾಹಿತಿ ಇದೆ.