ಉತ್ತಮ ನೌಕರಿ, ಕಾರು, ಮನೆ ಇದು ಎಲ್ಲರ ಬಯಕೆ. ಕಾರು ಖರೀದಿಯ ಎಲ್ಲರ ಕನಸು ಸುಲಭವಾಗಿ ಈಡೇರುವುದಿಲ್ಲ. ಜನಸಾಮಾನ್ಯರ ಕಾರಿನ ಕನಸನ್ನು ನನಸಾಗಿಸಲು ಟಾಟಾ ನ್ಯಾನೋ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು.
ಬೆಲೆ ಕಡಿಮೆಯಿದ್ದರೂ ನ್ಯಾನೋ ಕಾರ್, ಹೆಚ್ಚಾಗಿ ಗ್ರಾಹಕರನ್ನು ಸೆಳೆಯಲಿಲ್ಲ. ಇತರ ಕೆಲ ಸಮಸ್ಯೆಗಳಿಂದಾಗಿ ಟಾಟಾ ಕಂಪನಿ ಅಂತಿಮವಾಗಿ ನ್ಯಾನೋ ಕಾರುಗಳ ಮಾರಾಟ ನಿಲ್ಲಿಸಿತು. ಇದು ವಿಶ್ವದ ಅತ್ಯಂತ ಅಗ್ಗದ ಕಾರಾಗಿದ್ದು, ಕಂಪನಿ ಅನೇಕ ರೂಪಾಂತರದಲ್ಲಿ ಈ ಕಾರುಗಳನ್ನು ಬಿಡುಗಡೆ ಮಾಡಿತ್ತು. ಕೆಲ ಕಾರುಗಳು ರಸ್ತೆಗಿಳಿದ್ರೆ ಮತ್ತೆ ಕೆಲ ಕಾರುಗಳು ಬೀದಿಗಿಳಿಯಲಿಲ್ಲ.
ದಿ ಗ್ಯಾರೇಜ್ ಲೈಫ್ ಮೋಟಾರ್ ಹೆಸರಿನ ಚಾನೆಲ್ ಯೂಟ್ಯೂಬ್‌ನಲ್ಲಿ ವಿಡಿಯೋವನ್ನು ಅಪ್‌ಲೋಡ್ ಮಾಡಿದೆ. ಅದರಲ್ಲಿ ಕಾಣುವ ಐಷಾರಾಮಿ ಕಾರು ಟಾಟಾ ನ್ಯಾನೋ ಆಗಿದ್ದು, ಅದನ್ನು ಮಾರ್ಪಡಿಸಿ ಸಂಪೂರ್ಣವಾಗಿ ವಿಂಟೇಜ್ ಕಾರಾಗಿ ಪರಿವರ್ತಿಸಲಾಗಿದೆ. ಇದನ್ನು ನೋಡಿದವರು ಇದು ನ್ಯಾನೋ ಕಾರ್ ಎನ್ನಲು ಸಾಧ್ಯವಿಲ್ಲ.
ಕಾರಿನ ವಿನ್ಯಾಸ ಸಂಪೂರ್ಣ ಬದಲಾಗಿದೆ. ಕಾರಿಗೆ ರೆಟ್ರೊ ಲುಕ್ ನೀಡಲಾಗಿದ್ದು. ಮುಂಭಾಗದ ಫೆಂಡರ್‌ಗಳನ್ನು ಸ್ಲಿಮ್ ಮಾಡಲಾಗಿದೆ. ಕಾರಿನ ಮುಂಭಾಗದ ಗ್ರಿಲ್ ಅಂಡಾಕಾರದಲ್ಲಿದೆ. ಕಾರಿನ ಮುಂಭಾಗದಲ್ಲಿ ನೀಡಲಾಗಿರುವ ಆಕ್ಸಿಲರಿ ಲ್ಯಾಂಪ್, ಕಾರಿನ ಲುಕ್ ಬದಲಾಯಿಸಿದೆ.
ಕಾರಿನ ಇಂಡಿಕೇಟರ್‌ಗಳನ್ನು ಅದರ ಬಂಪರ್‌ಗಳಲ್ಲಿ ಅಳವಡಿಸಲಾಗಿದೆ. ಎಂಜಿನ್ ತಂಪಾಗಿರಿಸಲು ಬಾನೆಟ್‌ನ ಎರಡೂ ಬದಿಗಳಲ್ಲಿ ಏರ್ ವೆಂಟ್‌ಗಳನ್ನು ಒದಗಿಸಲಾಗಿದೆ. ಟಾಟಾ ನ್ಯಾನೋ ಗಾತ್ರದಲ್ಲಿ ಸಾಕಷ್ಟು ಚಿಕ್ಕದಾಗಿದ್ದರೂ, ವಿಂಟೇಜ್ ಕಾರಾಗಿ ಪರಿವರ್ತಿಸಿದಾಗ ಅದು ಸಾಕಷ್ಟು ಎತ್ತರವಾಗಿ ಕಾಣುತ್ತದೆ. ಟಾಟಾ ನ್ಯಾನೋ ಹಿಂಭಾಗದಲ್ಲಿ ಎಂಜಿನ್ ನೀಡಲಾಗಿದೆ. ಕಾರಿನ ಡ್ಯಾಶ್‌ಬೋರ್ಡ್ ಗೆ ನೀಲಿ ಬಣ್ಣ ನೀಡಲಾಗಿದೆ.