ಭಾರತದ ಪ್ರಮುಖ ಆಟೋಮೊಬೈಲ್ ತಯಾರಕರಾದ, ಟಾಟಾ ಮೋಟಾರ್ಸ್ ಗುಜರಾತ್ ನ ಸೂರತ್ ನಲ್ಲಿ ತನ್ನ ಮೂರನೆಯ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯ (ಆರ್ ವಿ ಎಸ್ ಎಫ್) ಬಿಡುಗಡೆಯ ಮೂಲಕ ಸುಸ್ಥಿರ ಸಾರಿಗೆಗೆ ತನ್ನ ಬದ್ಧತೆಯನ್ನು ಮುಂದುವರೆಸಿದೆ. ʼರೀ ಸೈಕಲ್ ವಿತ್ ರೆಸ್ಪೆಕ್ಟ್ʼ (Re.Wi.Re.) ಎಂದು ಹೆಸರಿಸಲಾದ, ಈ ಆಧುನಿಕ ಸೌಲಭ್ಯವನ್ನು ಟಾಟಾ ಮೋಟಾರ್ಸ್ ನ ಸಮೂಹ ಮುಖ್ಯ ಹಣಕಾಸು ಅಧಿಕಾರಿಯಾದ ಪಿ ಬಿ ಬಾಲಾಜಿ ಉದ್ಘಾಟಿಸಿದ್ದಾರೆ.
ಇದು ಅತ್ಯುತ್ತಮವಾದ ಸೌಲಭ್ಯ ಪರಿಸರ ಸ್ನೇಹಿ ಪ್ರಕ್ರಿಯೆಗಳನ್ನು ಬಳಸುತ್ತದೆ ಮತ್ತು ಪ್ರತೀ ವರ್ಷ 15,000 ಅವಧಿ ಮೀರಿದ ವಾಹನಗಳನ್ನು ಸುರಕ್ಷಿತವಾಗಿ ಮತ್ತು ಸುಸ್ಥಿರವಾಗಿ ವಾಹನದ ಭಾಗವನ್ನು ಪ್ರತ್ಯೇಕಗೊಳಿಸುವ ಸಾಮರ್ಥ್ಯ ಹೊಂದಿದೆ.
ಆರ್ ವಿ ಎಸ್ ಎಫ್ ಅನ್ನು ಅವಧಿ ಮೀರಿದ ಎಲ್ಲಾ ಬ್ರ್ಯಾಂಡ್ ಗಳ ಪ್ಯಾಸೆಂಜರ್ ಮತ್ತು ವಾಣಿಜ್ಯ ವಾಹನಗಳನ್ನು ಗುಜರಿ ಮಾಡಲು ಅನುಕೂಲವಾಗುವಂತೆ ಟಾಟಾ ಮೋಟಾರ್ಸ್ ನ ಪಾಲುದಾರರಾದ ಶ್ರೀ ಅಂಬಿಕಾ ಆಟೋರವರಿಂದ ಅಭಿವೃದ್ಧಿಪಡಿಸಿ, ನಿರ್ವಹಿಸಲ್ಪಡುತ್ತದೆ. ಈ ಆರಂಭ ಜೈಪುರ ಮತ್ತು ಭುವನೇಶ್ವರದಲ್ಲಿರುವ ಎರಡು ಸೌಲಭ್ಯಗಳ ಯಶಸ್ಸನ್ನು ಅನುಸರಿಸಲಿದೆ ಹಾಗೂ ಕಂಪನಿಯ ಸುಸ್ಥಿರ ಅಭಿಯನಗಳಿಗೆ ಮತ್ತೊಂದು ಪ್ರಮುಖ ಮೈಲಿಗಲ್ಲಾಗಲಿದೆ.