ದೇಶಿಯ ವಾಹನ ತಯಾರಕ ದಿಗ್ಗಜ ಕಂಪನಿ ಎನಿಸಿಕೊಂಡ ಟಾಟಾ ಮೋಟಾರ್ಸ್ ತನ್ನ ವಿವಿಧ ಶ್ರೇಣಿಯ ಕಾರುಗಳ ಮಾರಾಟದ ಮೇಲೆ ಭರ್ಜರಿ ರಿಯಾಯಿತಿ ಪ್ರಕಟಿಸಿದೆ. ಹ್ಯಾರಿಯರ್, ಟಿಗೋರ್, ಟಿಯಾಗೋ, ನೆಕ್ಸಾನ್, ಸಫಾರಿ ನಂತಹ ಮಾದರಿಯ ಮೇಲೂ ಸಹ ರಿಯಾಯಿತಿ ನೀಡಲಾಗುತ್ತಿದೆ.
65,000 ವರೆಗೆ ಬೃಹತ್ ರಿಯಾಯಿತಿ ನೀಡುತ್ತಿದ್ದು, ಈ ರಿಯಾಯಿತಿ ಕೊಡುಗೆಗಳು ನಗದು ಪ್ರಯೋಜನ, ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿ ರೂಪದಲ್ಲಿ ಸೇರಿವೆ. ನೆಕ್ಸಾನ್ ಇವಿ, ಟಿಗೋರ್ ಇವಿ, ಪಂಚ್ ಶ್ರೇಣಿಗೆ ರಿಯಾಯಿತಿ ಇರುವುದಿಲ್ಲ.
ಟಾಟಾ ಹ್ಯಾರಿಯರ್‌ನಲ್ಲಿ ಲಭ್ಯವಿರುವ ಆಫರ್‌ಗಳು ಎಲ್ಲಾ ವೇರಿಯಂಟ್‌ಗಳ ಮೇಲೆ ರೂ. 40,000 ವಿನಿಮಯ ಬೋನಸ್ ಸೇರಿದಂತೆ ರೂ. 65,000 ವರೆಗೆ ಗರಿಷ್ಠ ರಿಯಾಯಿತಿ ಪಡೆಯಬಹುದು.
ಈ ಸಾಕ್ಷ್ಯ ಚಿತ್ರ ವೀಕ್ಷಿಸಿದ್ರೆ ನಿಮಗೆ ಸಿಗುತ್ತೆ 1.8 ಲಕ್ಷ ರೂಪಾಯಿ…!
ಟಾಟಾ ಸಫಾರಿ ಎಲ್ಲಾ ಮಾದರಿಗಳಲ್ಲಿ ರೂ. 45,000 ವರೆಗಿನ ಪ್ರಯೋಜನ ಸಿಗಲಿದೆ. ಎಸ್ ಯುವಿಗೆ ಕಾರ್ಪೊರೇಟ್ ರಿಯಾಯಿತಿ ವ್ಯಾಪ್ತಿಗೆ ಬರುವುದಿಲ್ಲ.
ಟಾಟಾ ಟಿಗೋರ್‌ಗೆ 21,500 ರೂ.ವರೆಗೆ ರಿಯಾಯಿತಿಯೊಂದಿಗೆ ನೀಡಲಾಗುತ್ತಿದೆ. ಗೆಕ್ಸ್ ಜೆಡ್ ಮತ್ತು ಅದರ ಮೇಲಿನ ವೇರಿಯಂಟ್‌ಗೆ ಹೆಚ್ಚುವರಿ ರೂ. 10,000 ರಿಯಾಯಿತಿ ನೀಡಲಾಗುತ್ತದೆ. ಇದಲ್ಲದೆ, ರೂ. 11,500 ಕಾರ್ಪೊರೇಟ್ ರಿಯಾಯಿತಿ ಸಿಗಲಿದೆ. ಸೆಡಾನ್‌ನ ಸಿಎನ್‌ಜಿ ಮಾದರಿಗಳು ರಿಯಾಯಿತಿ ವ್ಯಾಪ್ತಿಗೆ ಬರುವುದಿಲ್ಲ.
ಟಾಟಾ ಟಿಯಾಗೊ ಎಲ್ಲಾ ವೇರಿಯಂಟ್‌ಗಳಿಗೆ 11,500 ರೂ. ಕಾರ್ಪೊರೇಟ್ ರಿಯಾಯಿತಿ ಒಳಗೊಂಡು ರೂ. 31,500 ವರೆಗಿನ ರಿಯಾಯಿತಿ ನೀಡಲಾಗುತ್ತಿದೆ.
ಟಾಟಾ ನೆಕ್ಸನ್ ಪೆಟ್ರೋಲ್‌ಗೆ ರೂ. 6,000 ಮತ್ತು ಡೀಸೆಲ್ ನೆಕ್ಸಾನ್‌ಗೆ ರೂ. 10,000 ಕಾರ್ಪೊರೇಟ್ ರಿಯಾಯಿತಿಗಳನ್ನು ನೀಡುತ್ತಿದೆ.