
ಟಾಟಾ ಮೋಟಾರ್ಸ್, ಮಹೀಂದ್ರ ಆ್ಯಂಡ್ ಮಹೀಂದ್ರಾದಂತಹ ಪ್ರಮುಖ ಕಂಪನಿಗಳ ಷೇರುಗಳು ನೆಲಕಚ್ಚಿವೆ. ಟಾಟಾ ಮೋಟಾರ್ಸ್ ಷೇರುಗಳು ಶೇ. 4.83ರಷ್ಟು ಕುಸಿದು, 34.20 ರೂ. ನಷ್ಟ ಅನುಭವಿಸಿವೆ.
ಮಹೀಂದ್ರ ಆ್ಯಂಡ್ ಮಹೀಂದ್ರಾ ಷೇರುಗಳು ಸಹ 0.29ರಷ್ಟು ಕುಸಿದು, 7.90 ರೂ. ನಷ್ಟ ಕಂಡಿವೆ. ಆದರೆ, ಮಾರುತಿ ಸುಜುಕಿ ಮಾತ್ರ ಈ ಪರಿಸ್ಥಿತಿಯಲ್ಲೂ ಲಾಭ ಗಳಿಸಿದೆ. ಮಾರುತಿ ಸುಜುಕಿ ಷೇರುಗಳು ಶೇ. 0.57ರಷ್ಟು ಏರಿಕೆ ಕಂಡು, 66.60 ರೂ. ಲಾಭ ಗಳಿಸಿವೆ.
ದ್ವಿಚಕ್ರ ವಾಹನ ತಯಾರಕ ಬಜಾಜ್ ಆಟೋ ಷೇರುಗಳು ಸಹ 0.16ರಷ್ಟು ಕುಸಿದು, 12.50 ರೂ. ನಷ್ಟ ಅನುಭವಿಸಿವೆ. ಈ ನಡುವೆ ಒಲಾ ಎಲೆಕ್ಟ್ರಿಕ್ ಷೇರುಗಳು ಶೇ. 3.59ರಷ್ಟು ಏರಿಕೆ ಕಂಡಿದ್ದು, 1.86 ರೂ. ಲಾಭ ಗಳಿಸಿವೆ. ಒಟ್ಟಾರೆಯಾಗಿ, ಟ್ರಂಪ್ ಅವರ ಈ ಟಾರಿಫ್‌ನಿಂದ ಭಾರತದ ವಾಹನ ಮಾರುಕಟ್ಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.


