ಟಾಟಾ ಮೋಟಾರ್ಸ್‌ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಲ್ಟ್ರೋಜ್‌ನ CNG ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ. ಇದರ ಬೆಲೆ 7.55 ಲಕ್ಷ ರೂಪಾಯಿಗಳು (ಎಕ್ಸ್-ಶೋರೂಮ್). ಕಂಪನಿಯ ಹೇಳಿಕೆಯ ಪ್ರಕಾರ, ಆಲ್ಟ್ರೋಜ್‌ನ CNGಯು ಆರು ರೂಪಾಂತರಗಳಲ್ಲಿ ಲಭ್ಯವಿದೆ. ರೂಪಾಂತರಗಳ ಬೆಲೆ 7.55 ಲಕ್ಷ ಮತ್ತು 10.55 ಲಕ್ಷ (ಎಕ್ಸ್ ಶೋ ರೂಂ).
ಹೊಸ ಆವೃತ್ತಿಯು ಅವಳಿ-ಸಿಲಿಂಡರ್ CNG ತಂತ್ರಜ್ಞಾನವನ್ನು ಹೊಂದಿದೆ. ಈ ಸಿಲಿಂಡರ್‌ಗಳನ್ನು ಲಗೇಜ್ ಪ್ರದೇಶದ ಕೆಳಗೆ ಅಳವಡಿಸಲಾಗಿದೆ. ವಾಲ್ವ್‌ಗಳು ಮತ್ತು ಪೈಪ್‌ಗಳ ಲೋಡ್ ನೆಲದ ಅಡಿಯಲ್ಲಿ ಸಂರಕ್ಷಿತವಾಗಿರುತ್ತವೆ. ಇದರಿಂದಾಗಿ ಸಂಭಾವ್ಯ ಹಾನಿಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಟಾಟಾ ಮೋಟಾರ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಇದು ಧ್ವನಿ-ನೆರವಿನ ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜರ್ ಮತ್ತು ಏರ್ ಪ್ಯೂರಿಫೈಯರ್ ಮುಂತಾದ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಕಂಪೆನಿ ಹೇಳಿದೆ.
ಎಲ್‌ಇಡಿ ಡಿಆರ್‌ಎಲ್‌ಗಳು, ಆರ್16 ಡೈಮಂಡ್ ಕಟ್ ಅಲಾಯ್ ವೀಲ್‌ಗಳು, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಂಪರ್ಕದೊಂದಿಗೆ 8-ಸ್ಪೀಕರ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ವೈಶಿಷ್ಟ್ಯಗಳನ್ನು ಈ ಕಾರು ಹೊಂದಿದೆ.