ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಆಲ್ಟ್ರೊಜ್ ಆಟೋಮ್ಯಾಟಿಕ್ ಕಾರಿನ ಕೊರತೆ ಬಹಳ ಹಿಂದಿನಿಂದಲೂ ಕಾಡ್ತಿದೆ. ಆದರೆ ಈಗ ಗ್ರಾಹಕರಿಗೆ ಖುಷಿ ಸುದ್ದಿ ಸಿಕ್ಕಿದೆ. ಟ್ವಿಟರ್ ನಲ್ಲಿ ಕಂಪನಿ ಖುಷಿ ಸುದ್ದಿ ನೀಡಿದೆ. ಟಾಟಾ ಮೋಟಾರ್ಸ್ ದೇಶದಲ್ಲಿ ಆಲ್ಟ್ರೊಜ್ ಆಟೋಮ್ಯಾಟಿಕ್ ಕಾರನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.
ಟಾಟಾ ಆಲ್ಟ್ರೊಜ್ ಆಟೋಮ್ಯಾಟಿಕ್ ರೂಪಾಂತರವನ್ನು ಶೀಘ್ರದಲ್ಲೇ ಲಭ್ಯವಾಗುವಂತೆ ಮಾಡಲಾಗುವುದು ಎಂದು ಕಂಪನಿ ಹೇಳಿದೆ. ಟಾಟಾ ಆಲ್ಟ್ರೊಜ್ ಆಟೋಮ್ಯಾಟಿಕ್ ಅನ್ನು ಇತ್ತೀಚೆಗೆ ಸ್ಪೈಡ್ ಟೆಸ್ಟಿಂಗ್ ಮಾಡಲಾಗಿದೆ.
ಟಾಟಾ ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಪೆಟ್ರೋಲ್ ಎಂಜಿನ್‌ನೊಂದಿಗೆ ಸ್ವಯಂಚಾಲಿತ ಗೇರ್‌ಬಾಕ್ಸ್ ನೀಡುವ ಸಾಧ್ಯತೆಯಿದೆ. ಆದರೆ ಡಿಸೇಲ್ ರೂಪಾಂತರ ಸಿಗುವುದು ಅನುಮಾನ. ಇದಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯಿದೆ. ಇದ್ರ ಅಂದಾಜು ಬೆಲೆ 7 ಲಕ್ಷ ರೂಪಾಯಿ ಎನ್ನಲಾಗ್ತಿದೆ.
ಟಾಟಾ ಮೋಟಾರ್ಸ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಆಲ್ಟ್ರೋಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಅನ್ನು ಬಿಡುಗಡೆ ಮಾಡಿದೆ. ಪ್ರಸ್ತುತ ಈ ಎರಡೂ ಎಂಜಿನ್‌ಗಳನ್ನು ಮ್ಯಾನುವಲ್ ಗೇರ್‌ಬಾಕ್ಸ್ ನೊಂದಿಗೆ ಮಾತ್ರ ಮಾರಾಟ ಮಾಡಲಾಗುತ್ತಿದೆ. ಇದರ ಆರಂಭಿಕ ಬೆಲೆ 5.89 ಲಕ್ಷ ರೂಪಾಯಿ ಆಗಿದ್ದು, ಉನ್ನತ ಮಾದರಿ ಬೆಲೆ 9.64 ಲಕ್ಷ ರೂಪಾಯಿಯಾಗಿದೆ.