ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ರಾಷ್ಟ್ರೀಯ ವಿನಿಮಯ ಕಾರ್ನಿವಲ್ ಅನ್ನು ದೇಶಾದ್ಯಂತ ಪ್ರಾರಂಭಿಸುವುದಾಗಿ ಘೋಷಿಸಿದೆ.
ಈ ಬ್ರಹತ್ ಕಾರ್ನೀವಲ್ ಸಮಯದಲ್ಲಿ, ಗ್ರಾಹಕರು ಯಾವುದೇ ಟಾಟಾ ಮೋಟಾರ್ಸ್ ಡೀಲರ್ ಶಿಪ್ಗೆ ಭೇಟಿ ನೀಡುವ ಮೂಲಕ ಎಲ್ಲಾ ಟಾಟಾ ಕಾರುಗಳು ಮತ್ತು ಯುವಿಗಳಲ್ಲಿ ಆಕರ್ಷಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಆಯ್ದ ಮಾದರಿಗಳಲ್ಲಿ 60,000 ರೂಪಾಯಿವರೆಗಿನ ವಿನಿಮಯ ಬೆನಿಫಿಟ್ಗಳನ್ನು ಪಡೆಯಬಹುದಾಗಿದೆ, ಈ ಗ್ರಾಹಕ ಕೇಂದ್ರಿತ ಉಪಕ್ರಮದ ಭಾಗವಾಗಿ 250 ನಗರಗಳಲ್ಲಿ ಟಾಟಾ ಮೋಟಾರ್ಸ್ ಅಧಿಕೃತ ಡೀಲರ್ಶಿಪ್ಗಳಲ್ಲಿ ಈ ಮೆಗಾ ಕಾರ್ನೀವಲ್ ಫೆಬ್ರವರಿ 15, 2023 ರವರೆಗೆ ನಡೆಯಲಿದೆ.
ಟಾಟಾ ಮೋಟರ್ಸ್ ಅಶ್ಯೂರಡ್ ಎಂಬುದು ಕಂಪನಿಯ ಪೂರ್ವ ಸ್ವಾಮ್ಯದ ಕಾರ್ ಪ್ರೋಗ್ರಾಂ ಆಗಿದ್ದು, ಗ್ರಾಹಕರಿಗೆ ತಮ್ಮ ಅಸ್ತಿತ್ವದಲ್ಲಿರುವ ಕಾರುಗಳನ್ನು ಹೊಸ ಟಾಟಾ ಕಾರುಗಳಿಗೆ ವಿನಿಮಯ ಮಾಡಿಕೊಳ್ಳಲು ಒಂದೇ ಸೂರಿನಡಿಯಲ್ಲಿ ಪರಿಹಾರವನ್ನು ಒದಗಿಸುತ್ತಿದೆ. 2009 ರಲ್ಲಿ ಪ್ರಾರಂಭವಾದಾಗಿನಿಂದ, ಈ ಪೂರ್ವ ಸ್ವಾಮ್ಯದ ಕಾರ್ ಪ್ರೋಗ್ರಾಂ ಎಲ್ಲಾ ನಿರೀಕ್ಷಿತ ಖರೀದಿದಾರರಿಗೆ ಆಕರ್ಷಕ ಪ್ರಯೋಜನಗಳನ್ನು ಒದಗಿಸುವಲ್ಲಿ ಅತ್ಯುತ್ತಮವಾಗಿದೆ.