ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಮತ್ತು ಟಾಟಾ ಗ್ರೂಪ್‌ನ ಜಾಗತಿಕ ವ್ಯಾಪಾರ ಮತ್ತು ವಿತರಣಾ ಅಂಗವಾದ ಟಾಟಾ ಇಂಟರ್‌ನ್ಯಾಷನಲ್ ಪುಣೆಯಲ್ಲಿ ಹೊಚ್ಚ ಹೊಸ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಘಟಕವನ್ನು ಉದ್ಘಾಟಿಸಿದೆ. ‘ರೀ.ವೈ.ರ್’ (Re.Wi.Re – ರೀಸೈಕಲ್ ವಿತ್ ರೆಸ್ಪೆಕ್ಟ್) ಎಂಬ ಹೆಸರಿನ ಈ ಅತ್ಯಾಧುನಿಕ ಘಟಕವು ಪರಿಸರ ಸ್ನೇಹಿ ಪ್ರಕ್ರಿಯೆಯ ಮೂಲಕ ವರ್ಷದಲ್ಲಿ 21,000 ಜೀವಿತಾವಧಿ ಮುಗಿದ ವಾಹನಗಳನ್ನು ಸುರಕ್ಷಿತವಾಗಿ ಡಿಸ್ಅಸೆಂಬಲ್ (ಸ್ಕ್ರಾಪ್ ಮಾಡುವ) ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಟಾಟಾದ ಈ ಹೊಸ ಘಟಕವನ್ನು ಟಾಟಾ ಇಂಟರ್‌ನ್ಯಾಷನಲ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿರುವ ಟಾಟಾ ಇಂಟರ್‌ನ್ಯಾಷನಲ್ ವೆಹಿಕಲ್ ಅಪ್ಲಿಕೇಷನ್ಸ್ (ಟಿಐವಿಎ) ನಿರ್ವಹಿಸಲಿದ್ದು, ಇಲ್ಲಿ ಎಲ್ಲಾ ಬ್ರ್ಯಾಂಡ್‌ಗಳ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಉದ್ದೇಶ ಹೊಂದಲಾಗಿದೆ.
ರೀ.ವೈ.ರ್ ಒಂದು ಅತ್ಯಾಧುನಿಕ ಘಟಕವಾಗಿದ್ದು, ಇಲ್ಲಿ ಪರಿಸರ ಸ್ನೇಹಿ ಪ್ರಕ್ರಿಯೆಯ ಮೂಲಕ ಜೀವಿತಾವಧಿ ಮುಗಿದ ಎಲ್ಲಾ ಬ್ರಾಂಡಿನ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳನ್ನು ಡಿಸ್ ಮ್ಯಾಂಟಲ್ ಮಾಡುವ ಅಥವಾ ಸ್ಕ್ರಾಪ್ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಜೈಪುರ, ಭುವನೇಶ್ವರ, ಸೂರತ್, ಚಂಡೀಗಢ ಮತ್ತು ದೆಹಲಿ ಎನ್ ಸಿ ಆರ್ ನಲ್ಲಿ ಈಗಾಗಲೇ ರೀ.ವೈ.ರ್ ಘಟಕಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.
ಪ್ರತಿಯೊಂದು ರೀ.ವೈ.ರ್ ಘಟಕವು ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿದ್ದು, ಅದರ ಎಲ್ಲಾ ಕಾರ್ಯಾಚರಣೆಗಳು ಕಾಗದರಹಿತವಾಗಿರುತ್ತದೆ ಮತ್ತು ನಿರಂತರವಾಗಿರುತ್ತದೆ. ವಾಣಿಜ್ಯ ಮತ್ತು ಪ್ರಯಾಣಿಕ ವಾಹನಗಳಿಗೆ ಸೆಲ್-ಟೈಪ್ ಮತ್ತು ಲೈನ್-ಟೈಪ್ ಡಿಸ್ಮಾಂಟ್ಲಿಂಗ್ ವ್ಯವಸ್ಥೆಯನ್ನು ಹೊಂದಿರುವ ಈ ಘಟಕವು ಟೈರ್‌ಗಳು, ಬ್ಯಾಟರಿಗಳು, ಇಂಧನ, ತೈಲಗಳು, ಲಿಕ್ವಿಡ್ ಗಳು ಮತ್ತು ಗ್ಯಾಸ್ ಸೇರಿದಂತೆ ವಿವಿಧ ಘಟಕಗಳನ್ನು ಸುರಕ್ಷಿತವಾಗಿ ಕಿತ್ತುಹಾಕಲು ಅಥವಾ ಡಿಸ್ ಮ್ಯಾಂಟಲ್ ಮಾಡಲು ಸೂಕ್ತವಾದ ವ್ಯವಸ್ಥೆಯನ್ನು ಹೊಂದಿವೆ. ಪ್ರತಿ ವಾಹನದ ಮಾಹಿತಿಯನ್ನು ನಿಖರವಾಗಿ ದಾಖಲಿಸಿಕೊಳ್ಳಲಾಗುತ್ತದೆ ಮತ್ತು ವಿಶೇಷವಾಗಿ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳನ್ನು ಜವಾಬ್ದಾರಿಯುತವಾಗಿ ಸ್ಕ್ರ್ಯಾಪಿಂಗ್ ಮಾಡುವಂತೆ ಈ ಘಟಕವನ್ನು ವಿನ್ಯಾಸಗೊಳಿಸಲಾಗಿದೆ. ರಾಷ್ಟ್ರದ ವಾಹನ ಸ್ಕ್ರ್ಯಾಪೇಜ್ ನೀತಿಯ ಪ್ರಕಾರವೇ ವಾಹನಗಳ ಎಲ್ಲಾ ಘಟಕಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲಾಗುತ್ತದೆ. ಈ ರೀ.ವೈ.ರ್ ಘಟಕದ ಪರಿಕಲ್ಪನೆ ಮತ್ತು ಘಟಕದ ಸ್ಥಾಪನೆ ಆಟೋಮೋಟಿವ್ ಉದ್ಯಮದಲ್ಲಿ ಸುಸ್ಥಿರ ಪದ್ಧತಿಗಳನ್ನು ಪಾಲಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ಟಾಟಾ ಇಂಟರ್ ನ್ಯಾಷನಲ್ ವೆಹಿಕಲ್ ಅಪ್ಲಿಕೇಷನ್ಸ್ (ಟಿಐವಿಎ) ಭಾರತದ ಅತಿದೊಡ್ಡ ಟ್ರೇಲರ್ ತಯಾರಕರಾಗಿದ್ದು, ಅಜ್ಮೇರ್, ಜಮ್ಶೆಡ್‌ಪುರ ಮತ್ತು ಪುಣೆಯಲ್ಲಿ ನಾಲ್ಕು ಅತ್ಯಾಧುನಿಕ ಉತ್ಪಾದನಾ ಘಟಕಗಳನ್ನು ಹೊಂದಿದೆ. ಕಂಪನಿಯು ಟ್ರೇಲರ್ ಮತ್ತು ಟ್ರಕ್ ಬಾಡಿ ಉತ್ಪಾದನಾ ವಲಯದಲ್ಲಿ ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ. ಸಂಸ್ಥೆಯು ಅತ್ಯಾಧುನಿಕ ಎಂಜಿನಿಯರಿಂಗ್ ತಂತ್ರಗಳನ್ನು ಹೊಂದಿದೆ ಮತ್ತು ವೈವಿಧ್ಯಮಯ ಉತ್ಪನ್ನಗಳನ್ನು ಒದಗಿಸುವ ಸಾಮರ್ಥ್ಯವನ್ನು ಕೂಡ ಗಳಿಸಿದೆ.