ದೇಶದ ಪ್ರಮುಖ ಉದ್ಯಮಿ ಟಾಟಾ ಗ್ರೂಪ್ ಈಗ ಭಾರತದಲ್ಲಿ ಐಫೋನ್ಗಳನ್ನು ತಯಾರಿಸಲಿದೆ. 750 ಮಿಲಿಯನ್ ಡಾಲರ್ ಅಂದರೆ ಸುಮಾರು 6700 ಕೋಟಿ ಮೊತ್ತದ ಆಪಲ್ನ ಪೂರೈಕೆದಾರ ವಿಸ್ಟ್ರಾನ್ ಕಾರ್ಖಾನೆಯ ಸ್ವಾಧೀನದ ಒಪ್ಪಂದ ಈಗಾಗ್ಲೇ ಫೈನಲ್ ಆಗಿದೆ. ವಿಸ್ಟ್ರಾನ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಟಾಟಾ ಗ್ರೂಪ್ ಐಫೋನ್ಗಳನ್ನು ಅಸೆಂಬಲ್ ಮಾಡುವ ಮೊದಲ ಭಾರತೀಯ ಕಂಪನಿಯಾಗಲಿದೆ. ಈ ಒಪ್ಪಂದದಲ್ಲಿ ವಿಸ್ಟ್ರಾನ್ನ ಸಾಲವೂ ಸೇರಿದೆ.
ಕಂಪನಿಯ ಮೇಲಿದೆ 75-80 ಮಿಲಿಯನ್ ಡಾಲರ್ ಸಾಲ !
ಸ್ವಾಧೀನ ಒಪ್ಪಂದಕ್ಕೆ ಎರಡೂ ಸಂಸ್ಥೆಗಳು ಸಹಿ ಹಾಕಿವೆ. 125 ಮಿಲಿಯನ್ ಡಾಲರ್ ಅಂದರೆ ಸುಮಾರು 1000 ಕೋಟಿ ರೂಪಾಯಿ ಪಾವತಿಸಿ ಕಂಪನಿಯನ್ನು ಟಾಟಾ ಗ್ರೂಪ್ ಸ್ವಾಧೀನಪಡಿಸಿಕೊಳ್ಳಲಿದೆ. ಆದರೆ ಇದು ಕೇವಲ ಇಕ್ವಿಟಿ ಚೆಕ್. ಇದಲ್ಲದೆ ಕಂಪನಿಯು 75-80 ಮಿಲಿಯನ್ ಡಾಲರ್ ಸಾಲವನ್ನು ಹೊಂದಿದ್ದು, ಅದನ್ನು ಸ್ವಾಧೀನಪಡಿಸಿಕೊಳ್ಳುವ ಕಂಪನಿಯು ಪಾವತಿಸಬೇಕಾಗುತ್ತದೆ. ಇದರ ಹೊರತಾಗಿ, ವಿಸ್ಟ್ರಾನ್ ಇಂಡಿಯಾಗೆ ಮಾತೃಸಂಸ್ಥೆಯಿಂದ 550 ಮಿಲಿಯನ್ ಡಾಲರ್ ಇಂಟರ್-ಕಾರ್ಪೊರೇಟ್ ಸಾಲವನ್ನು ನೀಡಲಾಗಿದೆ.
ವಿಸ್ಟ್ರಾನ್ ಅನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ತಮಿಳುನಾಡಿನ ಹೊಸೂರಿನಲ್ಲಿ ಉತ್ಪಾದನಾ ಘಟಕವನ್ನು ಹೊಂದಿದೆ. TEPL ದೇಶದ Apple ಪೂರೈಕೆದಾರರಲ್ಲಿ ಒಂದಾಗಿದೆ. ತೈವಾನ್ ಮೂಲದ ಕಂಪನಿ ವಿಸ್ಟ್ರಾನ್ 2008 ರಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು. ಆ ಸಮಯದಲ್ಲಿ ಕಂಪನಿಯು ಅನೇಕ ಸಾಧನಗಳಿಗೆ ದುರಸ್ತಿ ಸೌಲಭ್ಯಗಳನ್ನು ಒದಗಿಸಿತು.
2017 ರಲ್ಲಿ ವಿಸ್ಟ್ರಾನ್ ತನ್ನ ಕಾರ್ಯಾಚರಣೆಗಳನ್ನು ವಿಸ್ತರಿಸಿತು ಮತ್ತು Apple ಗಾಗಿ ಐಫೋನ್ಗಳ ಉತ್ಪಾದನೆಯನ್ನು ಪ್ರಾರಂಭಿಸಿತು. ವಿಸ್ಟ್ರಾನ್ನ ಈ ಸ್ಥಾವರದಲ್ಲಿ 14000 ರಿಂದ 15000 ಉದ್ಯೋಗಿಗಳು ಕೆಲಸ ಮಾಡುತ್ತಾರೆ. ಆಪಲ್ನ ನಿಯಮಗಳಿಂದಾಗಿ ಕಂಪನಿಗೆ ಲಾಭ ಗಳಿಸುವುದು ದುಸ್ತರವಾಯಿತು ಎಂದು ಹೇಳಲಾಗ್ತಿದೆ. ಹಾಗಾಗಿ ಕೊನೆಗೂ ಭಾರತದಲ್ಲಿರೋ ಕಾರ್ಖಾನೆಯನ್ನು ಸಂಸ್ಥೆ ಮಾರಾಟ ಮಾಡಿದೆ.