ಟಾಟಾ ಮೋಟಾರ್ಸ್ ಕಂಪನಿಯ ಹೊಸ ಟಾಟಾ ಆಲ್ಟ್ರೋಜ್ ರೇಸರ್ ಭಾರತದಲ್ಲೂ ಬಿಡುಗಡೆಯಾಗಿದೆ. ಕಾರಿನ ವಿನ್ಯಾಸ ಮತ್ತು ಫೀಚರ್ಸ್ ಗ್ರಾಹಕರನ್ನು ಆಕರ್ಷಿಸುವಂತಿವೆ. ಈ ಸ್ಪೋರ್ಟಿ ಹ್ಯಾಚ್ ಬ್ಯಾಕ್ ಕಾರಿನ ಬುಕ್ಕಿಂಗ್ ಕೂಡ ಈಗಾಗಲೇ ಆರಂಭವಾಗಿದೆ. ಟಾಟಾ ಆಲ್ಟ್ರೋಝ್ ರೇಸರ್ ಕಾರಿನ ಬೆಲೆ 9.49 ಲಕ್ಷ ರೂಪಾಯಿಗಳಿಂದ ಪ್ರಾರಂಭ. ಟಾಪ್ ಮಾಡೆಲ್‌ನ ಬೆಲೆ 10.99 ಲಕ್ಷ ರೂಪಾಯಿವರೆಗಿದೆ. ಈ ಕಾರು i20 N-Lineಗೆ ಪೈಪೋಟಿ ಒಡ್ಡಲಿದೆ.
ಟಾಟಾ ಆಲ್ಟ್ರೋಜ್ ರೇಸರ್ ಕಾರಿನ ವಿಶೇಷತೆ…
Altroz ರೇಸರ್ ಮೂಲಭೂತವಾಗಿ ಸಾಮಾನ್ಯ Altrozನ ಸ್ಪೋರ್ಟಿಯರ್ ಆವೃತ್ತಿಯಾಗಿದೆ. ಇದು ಶಕ್ತಿಯುತ ಎಂಜಿನ್, ಕೆಲವು ಕಾಸ್ಮೆಟಿಕ್ ಬದಲಾವಣೆಗಳು, ಹೊಸ ವೈಶಿಷ್ಟ್ಯಗಳೊಂದಿಗೆ ಬಂದಿದೆ. ಆಲ್ಟ್ರೋಜ್ ರೇಸರ್ ಅನ್ನು ಮೊದಲು 2023ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಯಿತು. ಬಳಿಕ ಇಂಡಿಯಾ ಮೊಬಿಲಿಟಿ ಎಕ್ಸ್‌ಪೋದಲ್ಲಿಯೂ ಇದು ಪ್ರದರ್ಶನ ಕಂಡಿದೆ.
ಆಲ್ಟ್ರೋಜ್ ರೇಸರ್ ಅನ್ನು ಏರ್ ಇನ್‌ಟೇಕ್‌ಗಳೊಂದಿಗೆ ಮರುವಿನ್ಯಾಸಗೊಳಿಸಲಾಗಿದೆ. ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳನ್ನು ಇದು ಹೊಂದಿದೆ. ರಿಫ್ರೆಶ್ಡ್ ಫ್ರಂಟ್ ಮತ್ತು ರೇಡಿಯೇಟರ್ ಗ್ರಿಲ್ ಇದರ ವಿಶೇಷತೆ ಡ್ಯುಯಲ್ ವೈಟ್ ಸ್ಟ್ರೈಪ್‌ಗಳನ್ನು ಸಹ ಅಳವಡಿಸಲಾಗಿದೆ.
ಕಾರಿನ ಇಂಟೀರಿಯರ್ ಸ್ಪೋರ್ಟಿಯಾಗಿದೆ. ಕಪ್ಪು ಡ್ಯಾಶ್‌ಬೋರ್ಡ್, ಸೀಟುಗಳು ಮತ್ತು ಸ್ಟೀರಿಂಗ್ ವೀಲ್‌ಗೆ ಕಾಂಟ್ರಾಸ್ಟ್ ಸ್ಟಿಚಿಂಗ್ ಇದೆ. ಈ ಕಾರು ಎಲೆಕ್ಟ್ರಿಕ್ ಸನ್‌ರೂಫ್ ಅನ್ನು ಸಹ ಹೊಂದಿದೆ. Apple CarPlay ಮತ್ತು Android Auto ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸಂಪರ್ಕಿತ ಕಾರ್ ತಂತ್ರಜ್ಞಾನ, ಗಾಳಿಯಾಡುವ ಸೀಟುಗಳು, 360 ಡಿಗ್ರಿ ಕ್ಯಾಮೆರಾ, ಸ್ವಯಂಚಾಲಿತ ಎಸಿ, ವೈರ್‌ಲೆಸ್ ಚಾರ್ಜಿಂಗ್, ಕ್ರೂಸ್ ಕಂಟ್ರೋಲ್, ಪಾರ್ಕಿಂಗ್ ಸೆನ್ಸಾರ್ ಹೀಗೆ ಹತ್ತಾರು ವಿಶೇಷತೆಗಳು ಈ ಕಾರಿನಲ್ಲಿವೆ. .
Altroz ರೇಸರ್ ಸಾಮಾನ್ಯ Altroz ಗಿಂತ ಹೆಚ್ಚು ಶಕ್ತಿಶಾಲಿ ಎಂಜಿನ್ ಹೊಂದಿದೆ. ರೇಸರ್ 1.2-ಲೀಟರ್, 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬಂದಿದೆ.