ಐಸ್ ಕ್ರೀಂ, ಕುಲ್ಫಿ ಹೆಸರು ಹೇಳಿದ್ರೆ ಮಕ್ಕಳ ಬಾಯಲ್ಲಿ ನೀರು ಬರುತ್ತೆ. ಮಾರುಕಟ್ಟೆಯಲ್ಲಿ ವೆರೈಟಿ ವೆರೈಟಿ ಕುಲ್ಫಿ, ಐಸ್ ಕ್ರೀಂ ಸಿಗುತ್ತೆ. ಆದ್ರೆ ಅನೇಕರು ಮಾರುಕಟ್ಟೆಯಲ್ಲಿ ಸಿಗುವ ಐಸ್ ಕ್ರೀಂ, ಕುಲ್ಫಿಯನ್ನು ಮಕ್ಕಳಿಗೆ ನೀಡಲು ಇಷ್ಟಪಡೋದಿಲ್ಲ. ಅಂತವರು ಕಡಿಮೆ ಪದಾರ್ಥ ಬಳಸಿ ರುಚಿರುಚಿ ಕುಲ್ಫಿಯನ್ನು ಮನೆಯಲ್ಲಿಯೇ ಮಾಡಿ ಮಕ್ಕಳಿಗೆ ನೀಡಬಹುದು.
ಕುಲ್ಫಿ ಮಾಡಲು ಬೇಕಾಗುವ ಪದಾರ್ಥ : ನಾಲ್ಕು ಬ್ರೆಡ್, 500 ಮಿಲೀ ಹಾಲು, ಒಂದು ಚಮಚ ಏಲಕ್ಕಿ ಪುಡಿ, ಅರ್ಧ ಕಪ್ ಗೋಡಂಬಿ, ಪಿಸ್ತಾ, ಬಾದಾಮಿ ಪುಡಿ, ರುಚಿಗೆ ತಕ್ಕಷ್ಟು ಸಕ್ಕರೆ.
ಕುಲ್ಫಿ ಮಾಡುವ ವಿಧಾನ : ಮೊದಲು ಬ್ರೆಡ್ ನ ಅಂಚುಗಳನ್ನು ಕತ್ತರಿಸಿ. ನಂತ್ರ ಬ್ರೆಡ್ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಇನ್ನೊಂದು ಪಾತ್ರೆಗೆ ಹಾಲು ಹಾಕಿ ಅದನ್ನು ಬಿಸಿ ಮಾಡಿಕೊಳ್ಳಿ. ಹಾಲು ದಪ್ಪಗಾಗ್ತಿದ್ದಂತೆ ಬ್ರೆಡ್ ಪುಡಿಯನ್ನು ಹಾಲಿಗೆ ಮಿಕ್ಸ್ ಮಾಡಿ. ಎರಡರಿಂದ ಮೂರು ನಿಮಿಷ ಹಾಲಿಗೆ ಸಕ್ಕರೆ ಹಾಗೂ ಏಲಕ್ಕಿ ಪುಡಿ ಹಾಕಿ. ಇದು ಸರಿಯಾಗಿ ಮಿಕ್ಸ್ ಆದ ನಂತ್ರ ಗ್ಯಾಸ್ ಬಂದ್ ಮಾಡಿ ಹಾಲು ಆರಲು ಬಿಡಿ. ಹಾಲು ತಣ್ಣಗಾದ ನಂತ್ರ ಅದನ್ನು ಕುಲ್ಫಿ ಕಪ್ ಗೆ ಹಾಕಿ ಪ್ರೀಜರ್ ನಲ್ಲಿ 8-10 ಗಂಟೆ ಇಡಿ.