ಪ್ರತಿ ದಿನ ಬೆಳಗಿನ ತಿಂಡಿಗೆ ಏನು ಮಾಡಬೇಕು ಎಂಬುವುದೇ ಗೊಂದಲ. ನೀವೇನಾದರೂ ಮೊಟ್ಟೆ ಪ್ರಿಯರಾಗಿದ್ದರೆ ಈ ಬ್ರೆಡ್ ಆಮ್ಲೆಟ್ ಟ್ರೈ ಮಾಡಿ ನೋಡಿ. ಕಡಿಮೆ ಸಮಯದಲ್ಲಿ ಸುಲಭವಾಗಿ ಆಗುವ ಈ ರೆಸಿಪಿ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಬ್ರೆಡ್ – 1
ಮೊಟ್ಟೆ – 2
ಖಾರ ಪುಡಿ – ಸ್ವಲ್ಪ
ಕಾಳು ಮೆಣಸಿನ ಪುಡಿ – ಸ್ವಲ್ಪ
ಟೊಮೆಟೊ ಕೆಚಪ್ – ಸ್ವಲ್ಪ
ಬೆಣ್ಣೆ ಸವರಲು
ಎಣ್ಣೆ ಬೇಕಾದಷ್ಟು
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಬ್ರೆಡ್ ಪೀಸ್ ಗೆ ಬೆಣ್ಣೆ ಸವರಿ ತವಾದ ಮೇಲೆ ಎರಡು ಕಡೆ ಟೋಸ್ಟ್ ಮಾಡಿಕೊಳ್ಳಬೇಕು. ಮೊಟ್ಟೆಯನ್ನು ಒಡೆದು ಬಟ್ಟಲಿಗೆ ಹಾಕಿ ಚೆನ್ನಾಗಿ ಗೊಟಾಯಿಸಿದ ಮೇಲೆ ಖಾರ ಪುಡಿ, ಕಾಳುಮೆಣಸಿನ ಪುಡಿ, ಉಪ್ಪು ಹಾಕಿ ಮತ್ತೊಮ್ಮೆ ಗೊಟಾಯಿಸಿ.
ಒಲೆಯ ಮೇಲೆ ತವಾ ಇರಿಸಿ ಎಣ್ಣೆ ಸವರಿ ಕಾದನಂತರ ಮೊಟ್ಟೆ ಮಿಶ್ರಣವನ್ನು ಹಾಕಿ ದೋಸೆ ರೀತಿ ವೃತ್ತಾಕಾರದಲ್ಲಿ ಹರಡಬೇಕು. ಮುಚ್ಚುಳ ಮುಚ್ಚಿ ಮಧ್ಯಮ ಉರಿಯಲ್ಲಿ ಆಮ್ಲೆಟ್ ಮುಕ್ಕಾಲು ಭಾಗ ಬೆಂದಾಗ, ಅದರ ಮೇಲೆ ಬ್ರೆಡ್ ಇಟ್ಟು ಚೆನ್ನಾಗಿ ಬೇಯಿಸಿ.
ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿ. ಕೊನೆಗೆ ತ್ರಿಕೋನಾಕಾರದಲ್ಲಿ ಕತ್ತರಿಸಿ ಟೊಮೆಟೊ ಕೆಚಪ್ ಜೊತೆ ಬ್ರೆಡ್ ಆಮ್ಲೆಟ್ ಸವಿಯಿರಿ.