ಬೇಕಾಗುವ ಪದಾರ್ಥಗಳು: ಮೈದಾ ಹಿಟ್ಟು- ಕಾಲು ಕೆ.ಜಿ., ಜೀರಿಗೆ ಪುಡಿ- ಅರ್ಧ ಚಮಚ, ಗರಂ ಮಸಾಲ- ಅರ್ಧ ಚಮಚ, ತುಪ್ಪ- 2 ಚಮಚ, ನಿಂಬೆ ರಸ, ಶುಂಠಿ ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು 1 ಕಟ್ಟು, ಹುಳಿ ಮೊಸರು- 2 ಚಮಚ, ಧನಿಯಾ ಪುಡಿ- 1 ಚಮಚ, ಅಡುಗೆ ಸೋಡಾ – 1 ಚಿಟಿಕೆ, ಆಲೂಗಡ್ಡೆ- 4, ಮೆಣಸಿನ ಪುಡಿ- ಸ್ವಲ್ಪ, ಬಟಾಣಿ- 100 ಗ್ರಾಂ (ಬೇಯಿಸಿದ್ದು), ಸಾಸಿವೆ- ಕಾಲು ಚಮಚ, ಹಸಿ ಮೆಣಸಿನಕಾಯಿ ನಾಲ್ಕು.
ಮಾಡುವ ವಿಧಾನ: ಮೈದಾ ಹಿಟ್ಟಿಗೆ ಉಪ್ಪು, ಸೋಡಾ ಹಾಗೂ ತುಪ್ಪ ಸೇರಿಸಿ ಮೊಸರು, ಬೆಚ್ಚಗಿನ ನೀರಿನೊಂದಿಗೆ ಕಲೆಸಿ ಚೆನ್ನಾಗಿ ನಾದಿ ಇಡಿ.
1 ಟೇಬಲ್ ಚಮಚ ಎಣ್ಣೆ ಕಾಯಿಸಿ ಸಾಸಿವೆ, ಶುಂಠಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಧನಿಯಾ ಪುಡಿ, ಗರಂ ಮಸಾಲ, ಜೀರಿಗೆ, ನಿಂಬೆರಸ, ಮೆಣಸಿನ ಪುಡಿ ಎಲ್ಲಾ ಒಗ್ಗರಣೆಯಲ್ಲಿ ಹುರಿಯಿರಿ. ನಂತರ ಇದಕ್ಕೆ ಬೇಯಿಸಿದ ಆಲೂಗಡ್ಡೆ ಸ್ಮ್ಯಾಶ್ ಮಾಡಿದ್ದು, ಬೇಯಿಸಿದ ಬಟಾಣಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಪಲ್ಯ ಮಾಡಿಕೊಳ್ಳಿ. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೇರಿಸಿ ಮಿಶ್ರ ಮಾಡಿ ಕಲೆಸಿದ ಮೈದಾ ಹಿಟ್ಟಿನಲ್ಲಿ ಚಿಕ್ಕ ಚಿಕ್ಕ ಚಪಾತಿ ಲಟ್ಟಿಸಿ ಮಿಶ್ರಣವನ್ನು ತುಂಬಿ ಎಣ್ಣೆಯಲ್ಲಿ ಕರಿಯಿರಿ. ಈಗ ಬಿಸಿ ಬಿಸಿ ಕಚೋರಿ ಸವಿಯಲು ಸಿದ್ಧ.