ಬೆಂಗಳೂರು : ಬೆಂಗಳೂರಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಿದೆ. ಸದರಿ ತಂಡವು ವಲಯ ಆಯುಕ್ತರ ನೇತೃತ್ವದಲ್ಲಿ ರಚನೆಯಾಗುತ್ತಿರುವ ಹಿನ್ನಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯವ್ಯಯದಲ್ಲಿ ರಸ್ತೆ ಗುಂಡಿ ಮುಚ್ಚಲು ಲಭ್ಯವಾಗುವ ಅನುದಾನದ ಅನುಮೋದನೆ ಮತ್ತು ಟೆಂಡರ್ ಅನುಮೋದಿಸುವ ಅಧಿಕಾರವನ್ನು ಸಹ ನೀಡಲು ಉದ್ದೇಶಿಸಲಾಗಿದೆ.
ಇದರಿಂದಾಗಿ, ಟಾಸ್ಕ ಪೋರ್ಸ್ ಸಮಿತಿಗೆ ರಸ್ತೆ ಗುಂಡಿ ಕಾಮಗಾರಿ ನಿರ್ವಹಿಸುವ ಜೊತೆಗೆ ಆರ್ಥಿಕ ಅಧಿಕಾರವನ್ನು ಸಹ ನೀಡಿದಂತಾಗುತ್ತದೆ. ಸದರಿ ಟಾಸ್ಕ್ ಪೋರ್ಸ್ ಸಮಿತಿಯು ರಸ್ತೆ ಗುಂಡಿಗಳನ್ನು ಸ್ವಯಂ ಗುರುತಿಸುವ ಜೊತೆ ಜೊತೆಗೆ ಸಂಚಾರ ಪೋಲಿಸ್ ವಿಭಾಗ ಮತ್ತು ಸಾರ್ವಜನಿಕರಿಂದ ಬರುವ ರಸ್ತೆ ಗುಂಡಿಗಳ ಬಗ್ಗೆ ದೂರನ್ನು ಆಧರಿಸಿಪಾರದರ್ಶಕವಾಗಿ ಗುರುತಿಸಿ ಅದನ್ನು ದುರಸ್ಥಿಗೊಳುಸಲು ಕ್ರಮಕೈಗೊಳ್ಳಬೇಕಾಗಿರುತ್ತದೆ.ಸದರಿ ರಸ್ತೆ ಗುಂಡಿ ಮುಚ್ಚುವ ಗುತ್ತಿಗೆದಾರರ ಬಿಲ್ಲುಗಳನ್ನು ಟಾಸ್ಕ್ ಪೋರ್ಸ್ ವಲಯ ಆಯುಕ್ತರಿಂದಲೇ ಪಾವತಿಸಲು ಸಹ ಉದ್ದೇಶಿಸಲಾಗಿದೆ.
ಸದರಿ ಸಮಿತಿಯನ್ನು ತಕ್ಷಣದಿಂದ ಜಾರಿಗೆಗೊಳಿಸಲಾಗಿದ್ದು, ಆಯಾ ವಲಯ ವ್ಯಾಪ್ತಿಯ ಟಾಸ್ಕ್ ಪೋರ್ಸ್ ಸಮಿತಿಯು ಪ್ರತಿ ಸೋಮವಾರ ಮತ್ತು ಗುರುವಾರ ಸಭೆ (ಕಡ್ಡಾಯವಾಗಿ ವಾರಕ್ಕೆ ಎರಡು ಬಾರಿ) ಸೇರಿ ರಸ್ತೆ ಗುಂಡಿ ನಿರ್ವಹಣೆಯ ಕಾಮಗಾರಿಯನ್ನು ಬಗ್ಗೆ ಕಾಲಾವಿಳಂಬವಿಲ್ಲದಂತೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿ ಆದೇಶಿಸಿದೆ.