ಈಗಿನ ಪರಿಸ್ಥಿಯಲ್ಲಿ ಸಂಬಳ ಬರುವ ಒಂದು ಕೆಲಸ ನಂಬಿಕೊಳ್ಳಲು ಸಾಧ್ಯವಿಲ್ಲ. ಕೆಲಸದ ಜೊತೆ ಪಾರ್ಟ್ ಟೈಂ ಬ್ಯುಸಿನೆಸ್ ಮಾಡಿದ್ರೆ ಆರ್ಥಿಕವಾಗಿ ಸದೃಢವಾಗಬಹುದು. ಕೆಲಸದ ಜೊತೆ ಬ್ಯುಸಿನೆಸ್ ಶುರು ಮಾಡ್ತಿನಿ ಎನ್ನುವವರಿಗೊಂದು ಸುವರ್ಣಾವಕಾಶವಿದೆ. ಓಲಾ ಜೊತೆ ಕೈಜೋಡಿಸಿ ನೀವು ಹಣ ಗಳಿಸಬಹುದು.
ಓಲಾ ಜೊತೆ ವ್ಯವಹಾರ ಶುರು ಮಾಡಿ ತಿಂಗಳಿಗೆ 40-45 ಸಾವಿರ ರೂಪಾಯಿ ಗಳಿಸಬಹುದು. ಓಲಾ ಫ್ಲಾಟ್ಫಾರ್ಮ್ ನಲ್ಲಿ ನಿಮ್ಮ ಕಾರ್ ಸೇರಿಸಿ ನೀವು ವ್ಯವಹಾರ ಶುರು ಮಾಡಬಹುದು. ಒಂದು, ಎರಡು ಹೀಗೆ ನಿಮಗೆ ಸಾಧ್ಯವಾದಷ್ಟು ಕಾರ್ ಸೇರಿಸಬಹುದು. ಹೆಚ್ಚು ಕಾರ್ ಸೇರಿಸಿದಷ್ಟು ನಿಮಗೆ ಹೆಚ್ಚು ಲಾಭ. https://partners.olacabs.com/attach ನಲ್ಲಿ ನಿಮಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ʼಕ್ರೆಡಿಟ್ ಕಾರ್ಡ್ʼ ನ ಈ ಲಾಭ ನಿಮಗೆ ತಿಳಿದಿರಲಿ
ಮೊದಲು ಪಾನ್ ಕಾರ್ಡ್, ರದ್ದಾದ ಚೆಕ್ ಬುಕ್, ಆಧಾರ್ ಕಾರ್ಡ್, ಮನೆ ವಿಳಾಸ, ವಾಹನದ ಆರ್ಸಿ, ವಾಹನ ಪರವಾನಿಗೆ, ಕಾರು ವಿಮೆ, ಚಾಲಕರ ಚಾಲನಾ ಪರವಾನಗಿ, ಆಧಾರ್ ಕಾರ್ಡ್, ಮನೆ ವಿಳಾಸವನ್ನು ನೀವು ನೀಡಬೇಕಾಗುತ್ತದೆ. ದಾಖಲೆ ಪರಿಶೀಲನೆ ನಂತ್ರ, ಎಲ್ಲವೂ ಸರಿಯಿದ್ದಲ್ಲಿ ಓಲಾ ನಿಮ್ಮ ಕಾರಿಗೆ ಅನುಮತಿ ನೀಡುತ್ತದೆ.
ನೀವು ಓಲಾ ಜೊತೆ ವ್ಯವಹಾರ ಶುರು ಮಾಡಬಹುದು. ಓಲಾ ನಿಮಗೆ ಅಪ್ಲಿಕೇಶನ್ ನೀಡುತ್ತದೆ. ಅದ್ರಲ್ಲಿ ನಿಮ್ಮ ಕಾರಿಗೆ ಸಂಬಂಧಿಸಿದ ಮಾಹಿತಿಯಿರುತ್ತದೆ. ಎಷ್ಟು ಬುಕ್ಕಿಂಗ್ ಆಗಿದೆ, ಎಷ್ಟು ಗಳಿಸಿದೆ ಎಂಬ ಮಾಹಿತಿ ಇರುತ್ತದೆ. ನಿಮ್ಮ ಖಾತೆಗೆ ನೇರವಾಗಿ ಹಣ ಹೋಗುತ್ತದೆ. ಚಾಲಕರಿಗೆ ಸಂಬಳ ನೀವು ನೀಡಬೇಕಾಗುತ್ತದೆ. ಕಂಪನಿ ಚಾಲಕರಿಗೆ ಅಪ್ಲಿಕೇಷನ್ ಬಳಕೆ ಬಗ್ಗೆ ತರಬೇತಿ ನೀಡುತ್ತದೆ.