
ಲಕ್ನೋ: ಹೋಳಿ ಹಬ್ಬ ಸಮೀಪಿಸುತ್ತಿರುವುದರಿಂದ ಹಬ್ಬದ ಸಮಯದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಸಂಭಾಲ್ ಆಡಳಿತವು ಭದ್ರತಾ ಕ್ರಮಗಳನ್ನು ಹೆಚ್ಚಿಸಿದೆ.
ಗಮನ ಸೆಳೆಯುವ ಕ್ರಮದಲ್ಲಿ, ಜಾಮಾ ಮಸೀದಿ ಸೇರಿದಂತೆ ಸಾಂಪ್ರದಾಯಿಕ ಮೆರವಣಿಗೆ ಮಾರ್ಗದಲ್ಲಿರುವ ಹಲವಾರು ಮಸೀದಿಗಳನ್ನು ಟಾರ್ಪಲ್ ಶೀಟ್ ಗಳಿಂದ ಮುಚ್ಚಲಾಗುತ್ತಿದೆ. ಆಚರಣೆಯ ಸಮಯದಲ್ಲಿ ಯಾವುದೇ ಸಂಭಾವ್ಯ ಉದ್ವಿಗ್ನತೆಯನ್ನು ತಡೆಗಟ್ಟಲು ಸ್ಥಳೀಯ ಸಮುದಾಯಗಳೊಂದಿಗೆ ಸಮಾಲೋಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.
ಹೋಳಿ ಮೆರವಣಿಗೆಯ ಮಾರ್ಗದಲ್ಲಿರುವ ಎಲ್ಲಾ 10 ಧಾರ್ಮಿಕ ಸ್ಥಳಗಳನ್ನು ಮುಚ್ಚಲಾಗುತ್ತಿದೆ. ಯಾವುದೇ ಪ್ರಚೋದನೆ ಅಥವಾ ಭಾವನೆಗಳಿಗೆ ನೋವುಂಟು ಮಾಡುವುದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಎರಡೂ ಕಡೆಯ ನಡುವೆ ಮಾತುಕತೆ ಮತ್ತು ಪರಸ್ಪರ ಒಪ್ಪಂದ ನಡೆದಿದೆ ಎಂದು ಎಎಸ್ಪಿ ಶ್ರೀಶ್ ಚಂದ್ರ ಹೇಳಿದ್ದಾರೆ,
ಮಸೀದಿ ರಕ್ಷಣೆಯ ಜೊತೆಗೆ ಆಡಳಿತವು 1,000 ಕ್ಕೂ ಹೆಚ್ಚು ವ್ಯಕ್ತಿಗಳನ್ನು ಬಂಧಿಸುವ ಮೂಲಕ ಪೂರ್ವಭಾವಿ ಕ್ರಮ ಕೈಗೊಂಡಿದೆ. ಎಸ್‌ಡಿಎಂ ಡಾ. ವಂದನಾ ಮಿಶ್ರಾ ಅವರ ಪ್ರಕಾರ, ಸಂಭಾವ್ಯ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ತಡೆಗಟ್ಟಲು ಸಾಮಾನ್ಯವಾಗಿ ಬಳಸಲಾಗುವ ಸಿಆರ್‌ಪಿಸಿಯ ಸೆಕ್ಷನ್ 126 ಮತ್ತು 135 ರ ಅಡಿಯಲ್ಲಿ 1,015 ಜನರನ್ನು ಬಂಧಿಸಲಾಗಿದೆ. ಶಾಂತಿಯುತ ಹೋಳಿಗೆ ಸಂಪೂರ್ಣ ಸಿದ್ಧತೆಗಳು ನಡೆದಿವೆ ಎಂದು ಹೇಳಿದ್ದಾರೆ.
#WATCH | Uttar Pradesh | Sambhal’s Jama Masjid being covered with Tarpaulin sheet ahead of Holi festival as per the decision of the local administration pic.twitter.com/cMIW0cV8mF
— ANI (@ANI) March 12, 2025