ಬೆಂಗಳೂರು: ನಗರದಲ್ಲಿ ಬೀಗ ಹಾಕಿದ್ದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಬರೋಬ್ಬರಿ 49 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ಶ್ರೀನಿವಾಸ್ ಅಲಿಯಾಸ್ ಸೀನ, ಸತೀಶ್ ಅಲಿಯಾಸ್ ಕೊಕ್ಕರೆ, ರಾಜಣ್ಣ ಅಲಿಯಾಸ್ ಕರಡಿ ಬಂಧಿತರು.
ಕದ್ದ ಒಡವೆ ಮಾರಿದ ಹಣದಲ್ಲಿ ಮೋಜು, ಮಸ್ತಿ ಮಾಡುತ್ತಿದ್ದರು. ಸಂಜಯನಗರ, ಕೋಡಿಗೆಹಳ್ಳಿ, ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಗಳಲ್ಲಿ ಶ್ರೀನಿವಾಸ್ 26 ಬಾರಿ ಕಳ್ಳತನ ಮಾಡಿ ಜೈಲು ಸೇರಿದ್ದ. ಬಿಡುಗಡೆಯಾದ ಬಳಿಕ ಮತ್ತದೆ ಕೆಲಸ ಮುಂದುವರೆಸಿದ್ದ.