ಬೆಂಗಳೂರು : ಮಳೆಯ ಕೊರತೆ ಹಾಗೂ ಹಲವು ಕಾರಣಗಳಿಂದ ಈ ವರ್ಷ ಬೆಂಗಳೂರು ಹಾಗೂ ರಾಜ್ಯದ ಇತರ ಕಡೆಗಳಲ್ಲಿ ನೀರಿನ ಅಭಾವ ಉಂಟಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನಲ್ಲಿ ಟ್ಯಾಂಕರ್ ಮಾಫಿಯಾಗೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು, ನೀರಿಗೆ ಹೊಸ ದರ ಫಿಕ್ಸ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಟ್ಯಾಂಕರ್ ಮಾಲೀಕರ ಜೊತೆ ಸಭೆ ನಡೆಸಿದ ಜಿಲ್ಲಾಡಳಿತ ಇದೀಗ ಎಲ್ಲ ಹೊಸ ದರ ನಿಗದಿ ಮಾಡಿ ಆದೇಶಿಸಿದೆ. ಹಾಗೂ ಇದೇ ದರದಲ್ಲಿ ನೀರು ಪೂರೈಸುವಂತೆ ಸೂಚನೆ ನೀಡಿದೆ.
6 ಸಾವಿರ ಲೀಟರ್ ಟ್ಯಾಂಕರ್ ಬೆಲೆ
5 ಕಿಲೋ ಮೀಟರ್ ಒಳಗೆ 600 ರೂ.
5ರಿಂದ 10 ಕಿ.ಮೀ.ವರೆಗೆ 750 ರೂ.
8 ಸಾವಿರ ಲೀಟರ್ ಟ್ಯಾಂಕರ್
5 ಕಿ.ಮೀಟರ್ ಒಳಗೆ ಆದರೆ 700 ದರ ನಿಗದಿ
5ರಿಂದ 10 ಕಿ.ಮೀ.ವರೆಗೆ ಒಳಗೆ ಆದರೆ 850 ರೂ.
12 ಸಾವಿರ ಲೀಟರ್ ಟ್ಯಾಂಕರ್
5 ಕಿ.ಮೀಟರ್ ಒಳಗೆ 1000 ದರ ನಿಗದಿ
5ರಿಂದ 10 ಕಿ.ಮೀ.ವರೆಗೆ 1250 ರೂ. ನಿಗದಿ
ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಪಡಿಸುವ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಅವರು ಇತ್ತೀಚೆಗೆ ಬಿಡಬ್ಲೂಎಸ್ಎಸ್ಬಿ, ಡಿಸಿ, ಬಿಬಿಎಂಪಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಾರಿಗೆ ಇಲಾಖೆ, ಬೆಸ್ಕಾಂ, ಜಂಟಿ ಆಯುಕ್ತರು, ಪೊಲೀಸ್ ಅಧಿಕಾರಿಗಳು ಮೊದಲಾದವರೊಂದಿಗೆ ಬಿಬಿಎಂಪಿ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ.
ಸುಮಾರು 3500 ಟ್ಯಾಂಕರ್ಗಳು ವಾಣಿಜ್ಯ ಚಟುವಟಿಕೆಯಲ್ಲಿ ತೊಡಗಿದ್ದು, ಈ ಪೈಕಿ 219 ಮಾತ್ರ ನೋಂದಣಿಯಾಗಿವೆ. ಮಾರ್ಚ್ 7ರ ನಂತರವೂ ನೋಂದಣಿ ಮಾಡಿಕೊಳ್ಳದ ಟ್ಯಾಂಕರ್ಗಳನ್ನು ಸೀಜ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನೀರಿನ ಅಭಾವ ತಲೆದೂರಿದ್ದು, ಟ್ಯಾಂಕರ್ ಮಾಫಿಯಾಗೆ ಬಿಬಿಎಂಪಿ ಕಡಿವಾಣ ಹಾಕುತ್ತಿದೆ. ಈ ನಿಟ್ಟಿನಲ್ಲಿ ಮಾ. 7 ರೊಳಗೆ ಸ್ವಯಂ ನೋಂದಾಯಿಸಿಕೊಳ್ಳಲು ಬಿಬಿಎಂಪಿ ಗಡುವು ನೀಡಿದೆ.ಬೇಸಿಗೆ ಹಿನ್ನೆಲೆ ನೀರಿನ ಅಭಾವವಿರುವ ಬೆಂಗಳೂರು ನಗರದ ಪ್ರದೇಶಗಳಲ್ಲಿ ಖಾಸಗಿ ಟ್ಯಾಂಕರ್ಗಳು ಹೆಚ್ಚಿನ ದರಕ್ಕೆ ಮಾರಾಟ ಮಾಡುವುದನ್ನು ತಡೆಯಲು ಬಿಬಿಎಂಪಿ ಕಠಿಣ ಕ್ರಮ ಕೈಗೊಂಡಿದೆ. ಮಾರ್ಚ್ 7ರೊಳಗೆ ಸ್ವಯಂ ನೋಂದಣಿ ಮಾಡಿಕೊಳ್ಳಲು ಟ್ಯಾಂಕರ್ ಮಾಲೀಕರಿಗೆ ಗಡುವು ನೀಡಿದೆ.