![](https://kannadadunia.com/wp-content/uploads/2022/10/nia-terror-funding_1654748714.jpeg)
ಚೆನ್ನೈ: ಉಗ್ರ ಸಂಘಟನೆ ಐಸಿಸ್ ಗೆ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ತಮಿಳುನಾಡು ಹಾಗೂ ತೆಲಂಗಾಣದ 30 ಕಡೆಗಳಲ್ಲಿ ದಾಳಿ ನಡೆಸಿದೆ.
ತಮಿಳುನಾಡಿನ ಕೊಯಮತ್ತೂರಿನ 21 ಸ್ಥಳಗಳಲ್ಲಿ, ಚೆನ್ನೈನ ಮೂರು ಕಡೆ ಹಾಗೂ ತೆಂಕ್ ಸಾಯಿಯ ಒಂದು ಕಡೆಗಳಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಡಿಎಂಕೆಯ ಓರ್ವ ಕೌನ್ಸಿಲರ್ ಮನೆ ಮೇಲೂ ದಾಳಿ ನಡೆದಿದೆ.
ತೆಲಂಗಾಣದ ಹೈದರಾಬಾದ್ ನ 5 ಕಡೆಗಳಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. 2022ರ ಕೊಯಮತ್ತೂರ್ ಸ್ಫೋಟ ಪ್ರಕರಣದ ಶಂಕಿತರೊಂದಿಗೆ ಸಂಪರ್ಕ ಹೊಂದಿದ್ದವರ ಬಗ್ಗೆಯೂ ಹೊಸ ಮಾಹಿತಿ ಲಭ್ಯವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಸೇರಿದ ಪ್ರದೇಶಗಳಲ್ಲಿ ಶೋಧ ನಡೆಸಲಾಗಿದೆ ಎಂದು ತಿಳಿದುಬಂದಿದೆ.