ಚೆನ್ನೈ: ಮಿಚಾಂಗ್ ಚಂಡಮಾರುತದಿಂದ ತತ್ತರಿಸಿದ್ದ ತಮಿಳುನಾಡಿಗೆ ಈಗ ಭೂಕಂಪದ ಭೀತಿ ಶುರುವಾಗಿದೆ. ತಮಿಳುನಾಡಿನ ಚಂಗಲ್ಪಟ್ಟು ಜಿಲ್ಲೆಯಲ್ಲಿ ಲಘು ಭೂಕಂಪ ಸಂಭವಿಸಿದೆ.
ಭೂಕಂಪದ ತೀವ್ರತೆ 3.2ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಚೆನ್ನೈ ಪ್ರಾದೇಶಿಕ ಹವಾಮಾನ ಕೇಂದ್ರ ಬಿಡುಗಡೆ ಮಾಡಿರುವ ದೈನಂದಿನ ಹವಾಮಾನ ಬುಲೆಟಿನ್ ಪ್ರಕಾರ ಚೆಂಗಲ್ಪಟ್ಟು, ಚೆನ್ನೈ, ತಿರುವಳ್ಳೂರು ಹಾಗೂ ಕಾಂಚಿಪುರಂನಲ್ಲಿ ಮಳೆಯಾಗುವ ನಿರೀಕ್ಷೆ ಇದೆ.
ಇನ್ನು ಮೆಘಾಲಯದ ಶಿಲ್ಲಾಂಗ್ ನಲ್ಲಿಯೂ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.8 ತೀವ್ರತೆ ದಾಖಲಾಗಿದೆ.