ಚೆನ್ನೈ: ರೈಲ್ವೆ ನಿಲ್ದಾಣದಲ್ಲಿ ಸೂಟ್ ಕೇಸ್ ನಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ತಮಿಳುನಾಡಿನ ಮಿಂಜೂರ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಚೆನ್ನೈ ಹೊರವಲಯದಲ್ಲಿರುವ ಮಿಂಜೂರ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಂತೆ ಬಂದ ತಂದೆ-ಮಗಳು ತಂದಿದ್ದ ಬೃಹತ್ ಸೂಟ್ ಕೇಸ್ ನಲ್ಲಿ ಮಹಿಳೆ ಶವ ಕಂಡು ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
ನ.4 ನಿನ್ನೆ ತಡರಾತ್ರಿ 43 ವರ್ಷದ ಬಾಲಸುಬ್ರಹ್ಮಣ್ಯಂ ಹಾಗೂ 17 ವರ್ಷದ ಮಗಳು ದೊಡ್ಡ ಸೂಟ್ ಕೇಸ್ ನೊಂದಿಗೆ ರೈಲು ನಿಲ್ದಾಣಕ್ಕೆ ಬಂದವರು. ಅಲ್ಲಿಯೇ ಸೂಟ್ ಕೇಸ್ ಬಿಟ್ಟು ತೆರಳುದ್ದರು. ಪ್ರಯಾಣಿಕರು ಈ ಬಗ್ಗೆ ರೈಲ್ವೆ ರಕ್ಷಣಾ ಪಡೆ-ಆರ್ ಪಿ ಎಫ್ ಗೆ ತಿಳಿಸಿದ್ದಾರೆ. ಸೂಟ್ ಕೇಸ್ ಬೃಹದಾಕಾರವಾಗಿದ್ದ ಕಾರಣ ಅದನ್ನು ಸ್ಥಳಾಂತರಿಸುವುದು ಕಷ್ಟಕರವಾಗಿತ್ತು. ಅನುಮಾನಗೊಂಡ ಆರ್ ಪಿ ಎಫ್ ಸಿಬ್ಬಂದಿಗಳು ಕೊರಕ್ಕುಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಬಾಲಸುಬ್ರಹ್ಮಣ್ಯಂ ಎಂಬುವವರನ್ನು ಸಂಪರ್ಕಿಸಿದ ಪೊಲೀಸರು ವಿಚಾರಿಸಿದಾಗ ಅವರು ಅಸ್ಪಷ್ಟವಾಗಿ ಮಾಹಿತಿ ನೀಡಿದ್ದಾರೆ. ಅನುಮಾನ ಹೆಚ್ಚಾಗುತ್ತಿದ್ದಂತೆ ಪೊಲೀಸರು ಸೂಟ್ ಕೇಸ್ ಓಪನ್ ಮಾಡಿ ನೋಡಿದ್ದಾರೆ. ಒಂದು ಕ್ಷಣ ಪೊಲೀಸರೇ ಬೆಚ್ಚು ಬಿದ್ದಿದ್ದಾರೆ. ಸೂಟ್ ಕೇಸ್ ನಲ್ಲಿ ಮಹಿಳೆಯೊಬ್ಬರ್ ಶವ ಪತ್ತೆಯಾಗಿದೆ.
ಪರಿಶೀಲನೆ ನಡೆಸಿದಾಗ ಮಹಿಳೆಯ ತಲೆಯ ಭಾಗದಲ್ಲಿ ಗಂಭೀರವಾದ ಗಾಯಗಳಾಗಿವೆ. ತಕ್ಷಣ ಬಾಲಸುಬ್ರಹ್ಮಣ್ಯಂ ಹಾಗೂ ಆತನ ಪುತ್ರಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.