![Tamil Nadu's First 'Free-of-cost' Shelter Home Aims to Empower the Trans Community](https://images.news18.com/ibnlive/uploads/2021/07/1626442095_transgenders-community.jpg?impolicy=website&width=510&height=356)
ದೇಶದಲ್ಲಿ ಸಲಿಂಗಿಗಳಿಗೆ ಬದುಕು ನಡೆಸುವುದು ಎಷ್ಟು ಕಷ್ಟವೆಂದು ನಾವೆಲ್ಲಾ ದಿನನಿತ್ಯ ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಂದು ಸಜ್ಜನರು, ಸಲಿಂಗಿಗಳ ನೆರವಿಗೆ ಬಂದು ಅವರಿಗೆ ಅಗತ್ಯವಿರುವ ನೆರವು ನೀಡುತ್ತಾರೆ.
ಇಂಥದ್ದೇ ನಿದರ್ಶನವೊಂದಲ್ಲಿ ಚೆನ್ನೈನ ಕೊಲತೂರ್ ಪ್ರದೇಶದ ಶೆಲ್ಟರ್ ಹೋಂ ಒಂದರಲ್ಲಿ ಕಷ್ಟದಲ್ಲಿರುವ ಸಲಿಂಗಿಗಳಿಗೆ ಆಶ್ರಯ ಕಲ್ಪಿಸಲಾಗಿದೆ.
ರಾಜ್ಯ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯ ನಿರ್ಮಿಸಿರುವ ಈ ಶೆಲ್ಟರ್ ಹೋಂ ತಮಿಳು ನಾಡಿನಲ್ಲಿ ಮೊದಲನೆಯದ್ದಾಗಿದೆ ಎಂದು ಸಲಿಂಗಿಗಳ ಹಕ್ಕುಗಳ ಸಂಘದ ನಿರ್ದೇಶಕ ಜೀವ ತಿಳಿಸಿದ್ದಾರೆ.
ತಂತಮ್ಮ ಕುಟುಂಬಗಳಿಂದ ಹೊರದೂಡಲ್ಪಟ್ಟ ಸಲಿಂಗಿಗಳು ಈ ಶೆಲ್ಟರ್ ಹೋಂನಲ್ಲಿ ಆಶ್ರಯ ಪಡೆಯಬಹುದಾಗಿದೆ.
ಇಲ್ಲಿ ಸಲಿಂಗಿಗಳಿಗೆ ಕೇವಲ ಅನ್ನಾಹಾರ ಮಾತ್ರವಲ್ಲದೇ ಸ್ವಾವಲಂಬನೆ ಬೆಳೆಸಿಕೊಳ್ಳಲು ಅನುವಾಗಲು ಅವರಿಗೆ ಬ್ಯೂಟಿ ಕೋರ್ಸ್‌ಗಳು, ಟೈಲರಿಂಗ್ ತರಬೇತಿ, ಜವಳಿ ತಯಾರಿಕೆ, ಸೆಣಬಿನ ಚೀಲಗಳ ಉತ್ಪಾದನೆ ಹಾಗೂ ಇತರೆ ಕುಶಲಕರ್ಮಿ ತರಬೇತಿ ನೀಡಲಾಗುತ್ತದೆ. ಒಮ್ಮೆ ತರಬೇತಿ ಪಡೆದ ಬಳಿಕ ಈ ತಂತಮ್ಮ ಕೌಶಲ್ಯ ಬಳಸಿಕೊಳ್ಳಲು ಉದ್ಯೋಗಾವಕಾಶ ನೀಡಲಾಗುತ್ತದೆ.