ಸಶಸ್ತ್ರ ಪಡೆಗಳ ಸಿಬ್ಬಂದಿಯ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಇನ್ನಿತರ ಅಧಿಕಾರಿಗಳ ಸಾವಿಗೆ ಕಾರಣವಾದ ಕೂನೂರು ಹೆಲಿಕಾಪ್ಟರ್ ದುರಂತದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ತಮಿಳುನಾಡಿನ ಯೂಟ್ಯೂಬರ್ ಮರಿದಾಸ್ ಎಂಬಾತನನ್ನು ರಾಜ್ಯ ಪೊಲೀಸರು ಬಂಧಿಸಿದ್ದಾರೆ.
ಡಿಎಂಕೆ ಆಡಳಿತದ ಅವಧಿಯಲ್ಲಿ ತಮಿಳುನಾಡು ಕಾಶ್ಮೀರವಾಗಿ ಬದಲಾಗುತ್ತಿದೆಯೇ ಎಂದು ಟ್ವೀಟ್‌ನಲ್ಲಿ ಕೇಳಿದ್ದ ಮರಿದಾಸ್, ಕೂಡಲೇ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದರು. ಡಿಎಂಕೆಯ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಜನರಲ್ ರಾವತ್‌ರ ಸಾವನ್ನು ಸಂಭ್ರಮಿಸಿದ್ದಾರೆ ಎಂದಿದ್ದ ಮರಿದಾಸ್, ಪ್ರತ್ಯೇಕತಾವಾದಿಗಳ ಮೊದಲ ಆಯ್ಕೆ ಡಿಎಂಕೆ ಆಗಿದೆ ಎಂದಿದ್ದಾರೆ.
BIG NEWS: ಒಮಿಕ್ರಾನ್ ಪೀಡಿತ ಒಂಬತ್ತು ಮಂದಿ ಗುಣಮುಖರಾಗಿ ಡಿಸ್ಚಾರ್ಜ್
ಮಧುರೈನ ಮರಿದಾಸ್‌ರ ನಿವಾಸಕ್ಕೆ ಬಾರದಂತೆ ಪೊಲೀಸರನ್ನು ಬಿಜೆಪಿ ಕಾರ್ಯಕರ್ತರು ತಡೆಯೊಡ್ಡಿದ್ದರು. ಮರಿದಾಸ್‌ರನ್ನು ಬಂಧನಕ್ಕೆ ಪಡೆಯಲು ಪೊಲೀಸರು ಬಲ ಪ್ರಯೋಗ ಮಾಡಬೇಕಾಗಿ ಬಂದಿದೆ. ಭಾರತೀಯ ದಂಡ ಸಂಹಿತೆಯ ಅಡಿ ಕೆಲವೊಂದು ವಿಧಿಗಳ ಅಡಿಯಲ್ಲಿ ಸೈಬರ್ ಪೊಲೀಸರು ಮರಿದಾಸ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.