
ಪೂರ್ಣವಾಗಿ ಚಾಚಿದಾಗ 10.8 ಸೆಂಮೀ ಉದ್ದದ ನಾಲಿಗೆ ಹೊಂದಿರುವ ತಮಿಳುನಾಡಿನ ವಿರುದ್ಧನಗರ ಬಳಿಯ ತಿರುತಂಗಲ್ ನಿವಾಸಿ ಕೆ. ಪ್ರವೀಣ್ ದಾಖಲೆಯ ಪುಸ್ತಕ ಸೇರಿದ್ದಾರೆ.
ಸಾಮಾನ್ಯವಾಗಿ ಮಾನವರ ನಾಲಿಗೆಯು ಸರಾಸರಿ 8.5 ಸೆಂಮೀ ಬೆಳೆಯುತ್ತದೆ. ಆದರೆ 20 ವರ್ಷದ ಬಿಇ ರೊಬಾಟಿಕ್ಸ್‌ನ ವಿದ್ಯಾರ್ಥಿಯಾದ ಪ್ರವೀಣ್ ತಮ್ಮ 10.8 ಸೆಂಮೀ ಉದ್ದದ ನಾಲಿಗೆ ಮೂಲಕ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾರೆ.
ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಉಚಿತ ಟ್ಯಾಬ್ ವಿತರಣೆಗೆ ನಾಳೆ ಸಿಎಂ ಚಾಲನೆ
ತನ್ನ ನಾಲಿಗೆ ಮೇಲೆ ದೇಶದ ಪ್ರಖ್ಯಾತನಾಮರ ಚಿತ್ರಗಳನ್ನು ಬರೆದುಕೊಳ್ಳಬಲ್ಲ ಪ್ರವೀಣ್, ತಮಿಳು ಅಕ್ಷರಗಳನ್ನೂ ಸಹ ನಾಲಿಗೆ ಮೇಲೆ ಬರೆಯಬಲ್ಲರು.
ಸಂಜೆ ವೇಳೆ ಪ್ರಿಯಕರನ ಭೇಟಿಗೆ ಹೋದ ಹುಡುಗಿ, ಪ್ರೀತಿ ವಿಷ್ಯಕ್ಕೆ ನಡೀತಾ ಮರ್ಯಾದೆಗೇಡು ಹತ್ಯೆ…? ಕಲ್ಲಿನಿಂದ ಜಜ್ಜಿ ಪ್ರೇಮಿಗಳ ಭೀಕರ ಮರ್ಡರ್
ಮುಂಬರುವ ದಿನಗಳಲ್ಲಿ ಗಿನ್ನೆಸ್ ದಾಖಲೆ ಪುಸ್ತಕ ಸೇರಲು ಪ್ರವೀಣ್ ಚಿಂತನೆ ಮಾಡುತ್ತಿದ್ದಾರೆ.