ಚೆನ್ನೈ: ಆಘಾತಕಾರಿ ಘಟನೆಯೊಂದರಲ್ಲಿ 36 ವರ್ಷದ ಮಹಿಳೆ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದಿದ್ದಾಳೆ. ಡಿಸೆಂಬರ್ 22 ರಂದು ಘಟನೆ ನಡೆದಿದೆ. ತುಡಿಯಲೂರ್ ಪೊಲೀಸರು ಶನಿವಾರ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಆರ್. ರೀನಾ ಮತ್ತು ಕವುಂಡಂಪಾಳ್ಯಂನ ಅಂಬೇಡ್ಕರ್ ನಗರದ ನಿವಾಸಿ ಸತೀಶ್ ಎಂದು ಗುರುತಿಸಲಾಗಿದೆ.
ವರದಿಯ ಪ್ರಕಾರ, ರೀನಾ 12 ವರ್ಷಗಳ ಹಿಂದೆ ರಾಜಾ(ಎಲೆಕ್ಟ್ರಿಷಿಯನ್) ಅವರನ್ನು ಮದುವೆಯಾಗಿದ್ದಳು. ರಾಜಾ ಆಗಾಗ ಮದ್ಯ ಸೇವಿಸಿ ರೀನಾಳನ್ನು ಥಳಿಸುತ್ತಿದ್ದ. ಡಿಸೆಂಬರ್ 22 ರಂದು ಆರೋಪಿ ಮಹಿಳೆ ತನ್ನ ಗಂಡನ ಕುಟುಂಬ ಮತ್ತು ಸಂಬಂಧಿಕರಿಗೆ ರಾಜಾ ಅತಿಯಾದ ಮದ್ಯಪಾನದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾಳೆ.
ಘಟನೆಯ ನಂತರ, ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿದ್ದು, ಇನ್ಸ್ ಪೆಕ್ಟರ್ ಅನ್ನಮ್ ಸಂತ್ರಸ್ತೆಯ ಕುತ್ತಿಗೆಯಲ್ಲಿ ಪೆಟ್ಟು, ಗಾಯ ಗಮನಿಸಿದ್ದಾರೆ. ಏತನ್ಮಧ್ಯೆ, ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೊಯಮತ್ತೂರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ. ರಾಜಾ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ವೈದ್ಯಕೀಯ ವರದಿ ದೃಢಪಡಿಸಿದೆ.
ನಂತರ ವಿಚಾರಣೆ ವೇಳೆ ಆರೋಪಿ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ. ಸತೀಶ್ ಸಹಾಯದಿಂದ ತನ್ನ ಪತಿಯನ್ನು ಕೊಲೆ ಮಾಡಿದ್ದಾಳೆ. ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಎರಡು ವರ್ಷಗಳ ಹಿಂದೆ ರಾಜಾನಿಗೆ ಗೊತ್ತಾಗಿ ಪತ್ನಿಗೆ ಬುದ್ಧಿಮಾತು ಹೇಳಿದ್ದ. ಇಬ್ಬರಿಗೆ ಎಚ್ಚರಿಕೆ ನೀಡಿದ್ದರೂ ಅವರು ತಮ್ಮ ಸಂಬಂಧವನ್ನು ಮುಂದುವರೆಸಿದ್ದರು. ಸಂಬಂಧಕ್ಕೆ ಅಡ್ಡಿಯಾಗಿದ್ದ ಕಾರಣಕ್ಕೆ ಕೊಲೆ ಮಾಡಿದ್ದಾರೆನ್ನಲಾಗಿದೆ.