ತಮಿಳುನಾಡು ಕಾಂಚೀಪುರಂನ ಆಯಿಲ್ ಸ್ಟ್ರೀಟ್‌ನಲ್ಲಿ ವಾಸವಾಗಿದ್ದ 34 ವರ್ಷದ ರೇವತಿ ವಿಚಿತ್ರವಾದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮಾರ್ಚ್ ನಾಲ್ಕನೇ ತಾರೀಖಿನಂದು ರೇವತಿಯವರು ಹಲ್ಲುಜ್ಜುತ್ತಿರುವಾಗ, ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಆಕೆ ಬಿದ್ದ ರಭಸಕ್ಕೆ ಬಾಯಿಯಲ್ಲಿದ್ದ ಹಲ್ಲುಜ್ಜುವ ಬ್ರಷ್ ಟೂತ್ ಫಿಕ್ಸ್ ಸೀಳಿಕೊಂಡು, ಕೆನ್ನೆಯ ಭಾಗದಲ್ಲಿ ಅಂಟಿಕೊಂಡಿದೆ.
ಈ ಅಪಘಾತದಿಂದ ಬಾಯಿ ತೆರೆಯಲು, ಮುಚ್ಚಲು ಸಾಧ್ಯವಾಗದ ರೇವತಿಯನ್ನು ರಕ್ಷಿಸಿ ಕಾಂಚೀಪುರಂ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ನರೇನ್ ಮತ್ತು ವೆಂಕಟೇಶ್ ಅವರು ಸಮಾಲೋಚಿಸಿ ರೇವತಿಯ ಕೆನ್ನೆಯ ಮೂಲಕ ಹಲ್ಲುಜ್ಜುವ ಬ್ರಷ್ ಅನ್ನು ತೆಗೆಯಬಹುದು ಎಂದು ನಿರ್ಧರಿಸಿದರು.
BREAKING: ಬಜರಂಗದಳ ಹರ್ಷ ಕೊಲೆ ಪ್ರಕರಣ ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯ
ಅದರಂತೆ ರೇವತಿಗೆ ನೋವು ಬಾರದಂತೆ ಅರಿವಳಿಕೆ ನೀಡಿ ಬಾಯಿಯ ಹಲ್ಲಿನ ಕುಳಿಗಳಲ್ಲಿ ಆರಾಮವಾಗಿ ಸಿಲುಕಿಕೊಂಡಿದ್ದ ಟೂತ್ ಬ್ರಶ್ ಅನ್ನು ಹೊರಕಿವಿಯ ಕೆಳಗೆ ಚುಚ್ಚಿ ಕೆನ್ನೆಯ ಮೂಲಕ ಹೊರಬಂದ ಟೂತ್ ಬ್ರಶ್ ನ ಅರ್ಧ ಭಾಗ ತುಂಡರಿಸಲಾಯಿತು.
ಅದೇ ರೀತಿ ಬಾಯಿಯಲ್ಲಿ ಟೂತ್ ಪಿಕ್ ಗಳ ಮಧ್ಯದಲ್ಲಿ ತುಂಬಾ ಆಳವಾಗಿ ಅಂಟಿಕೊಂಡಿದ್ದ ಟೂತ್ ಬ್ರಷ್ ನ ಅರ್ಧ ಭಾಗವನ್ನು ಶಸ್ತ್ರಚಿಕಿತ್ಸೆ ಮಾಡಿ ಬಾಯಿಯಿಂದ ಹೊರತೆಗೆದರು.
ಸದ್ಯ ರೇವತಿ ಆಸ್ಪತ್ರೆಯಲ್ಲಿ ಸುರಕ್ಷಿತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ಟೂತ್ ಬ್ರಶ್ ಅನ್ನು ಮುಖದ ಮೂಲಕ ತೆಗೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಸ್ತ್ರಚಿಕಿತ್ಸಕರಾದ ಡಾ. ನರೇನ್ ಮತ್ತು ಡಾ. ವೆಂಕಟೇಶ್ ಅವರಿಗೂ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.