ತಿರುಚ್ಚಿ: ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ಕೆ.ಕೆ. ನಗರದಲ್ಲಿ ಸೆ.6 ರಂದು ನಡೆದ ಯುವಕನ ಕೊಲೆಗೆ ಸಂಬಂಧಿಸಿದಂತೆ ತೃತೀಯಲಿಂಗಿಯನ್ನು ಬಂಧಿಸಲಾಗಿದೆ.
ಲೈಂಗಿಕ ಕ್ರಿಯೆ ನಂತರ ಹಣದ ವಿಚಾರದಲ್ಲಿ ಜಗಳವಾಗಿ ವ್ಯಕ್ತಿಯನ್ನು ಹೊಡೆದು ಕೊಲೆ ಮಾಡಲಾಗಿದೆ. ಮನ್ನಾರ್ ಪುರಂನ ಆರೋಪಿ ವೈಷ್ಣವಿ(35)ಯನ್ನು ಬಂಧಿಸಲಾಗಿದೆ. ಮನ್ನಚನಲ್ಲೂರು ಪಟ್ಟಣದ ಪೂನಂಪಾಳ್ಯಂ ಗ್ರಾಮದ ಕೆ. ಬಾಸ್ಕರ್(28) ಕೊಲೆಯಾದ ಯುವಕ.
ಲೈಂಗಿಕ ಕ್ರಿಯೆ ನಂತರ ಹಣ ಪಾವತಿಸುವ ವಿಚಾರದಲ್ಲಿ ಜಗಳವಾಗಿ ಕೊಲೆ ಮಾಡಲಾಗಿದೆ. ಸೆಪ್ಟೆಂಬರ್ 7 ರಂದು ಮಧುರೈ-ತಿರುಚಿ ರಾಷ್ಟ್ರೀಯ ಹೆದ್ದಾರಿಯ ಕೆಕೆ ನಗರದ ಬಳಿಯ ಕೃಷ್ಣಮೂರ್ತಿ ನಗರದಲ್ಲಿ ಶವ ಪತ್ತೆಯಾಗಿದೆ.
ಅಪರಾಧ ನಡೆದ ರಾತ್ರಿಯಲ್ಲಿ ಆ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಸಿಸಿಟಿವಿ ದೃಶ್ಯಗಳು ಮತ್ತು ಸೆಲ್ ಫೋನ್ ಗಳನ್ನು ಆಧರಿಸಿ ತನಿಖಾ ತಂಡ ಆರೋಪಿಯನ್ನು ಬಂಧಿಸಿದೆ.
ಪೊಲೀಸರ ಪ್ರಕಾರ, ಬೆಂಗಳೂರಿನಲ್ಲಿ ನೆಲೆಸಿರುವ ವೈಷ್ಣವಿ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ಭೇಟಿಯಾಗಲು ತಿಂಗಳ ಹಿಂದೆ ತಿರುಚ್ಚಿಗೆ ಬಂದಿದ್ದರು. ಹಣ ಖಾಲಿಯಾದಾಗ ವೈಷ್ಣವಿ ಹೈವೇಯಲ್ಲಿ ಗ್ರಾಹಕರನ್ನು ಹುಡುಕಲು ನಿರ್ಧರಿಸಿದ್ದಳು. ಭಾಸ್ಕರ್ ಸೆಪ್ಟೆಂಬರ್ 6 ರಂದು ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ವೈಷ್ಣವಿಯನ್ನು ಭೇಟಿಯಾಗಿ ಆಕೆಯೊಂದಿಗೆ ಹೋಗಿದ್ದಾನೆ. ನಂತರ ಹಣಕ್ಕಾಗಿ ಜಗಳವಾಡಿದ್ದು, ವೈಷ್ಣವಿ ಮರದ ತುಂಡಿನಿಂದ ಹೊಡೆದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪರಾಧ ಕೃತ್ಯದ ನಂತರ ವೈಷ್ಣವಿ ಬೆಂಗಳೂರಿಗೆ ವಾಪಸಾಗಿದ್ದಳು. ಅವಳು ತಿರುಚ್ಚಿಗೆ ಹಿಂದಿರುಗಿದಾಗ ಬಂಧಿಸಲಾಗಿದೆ ಎಂದು ಹೇಳಲಾಗಿದೆ.