ತಮಿಳುನಾಡು ಕೃಷಿ ಹಾಗೂ ರೈತ ಕಲ್ಯಾಣ ಇಲಾಖೆಯ ಆಯುಕ್ತರು ಹಾಗೂ ಕಾರ್ಯದರ್ಶಿ ಸಿ. ಸಮಯಮೂರ್ತಿ ಈರೋಡ್ನಲ್ಲಿ ಅರಿಶಿನ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ.
ಪೊನ್ಮಂಜಲ್ – ಸಿಐಐ ಅರಿಶಿಣ ಕಾನ್ಕೇವ್ 2021ರ ಮೂರನೇ ಆವೃತ್ತಿಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಭಾರತದ ಒಟ್ಟು ಅರಿಶಿಣ ಉತ್ಪಾದನೆಯಲ್ಲಿ ತಮಿಳುನಾಡಿನ ಕೊಡುಗೆಯನ್ನು ಉಲ್ಲೇಖಿಸಿದ ಸಮಯಮೂರ್ತಿ ಈರೋಡ್ ಜಿಲ್ಲೆಯು ಅರಿಶಿಣ ಉತ್ಪಾದನೆಯಲ್ಲಿ ಅತ್ಯಂತ ದೊಡ್ಡ ಪಾತ್ರ ನಿರ್ವಹಿಸಿದೆ ಎಂದು ಹೇಳಿದ್ರು.
ಸಂಪೂರ್ಣ ದೇಶದಲ್ಲಿನ ಅರಿಶಿಣ ಉತ್ಪಾದನೆಯಲ್ಲಿ ತಮಿಳುನಾಡು ಪಾಲು 14.04 ಪ್ರತಿಶತವಿದ್ದರೆ ತಮಿಳುನಾಡಿನ ಒಟ್ಟು ಅರಿಶಿಣ ಉತ್ಪಾದನೆಯಲ್ಲಿ ಈರೋಡ್ ಜಿಲ್ಲೆಯ ಪಾಲು 33.37 ಪ್ರತಿಶತವಿದೆ. ಈರೋಡ್ ಜಿಲ್ಲೆಯ ಒಟ್ಟು ಕೃಷಿಭೂಮಿಯಲ್ಲಿ 24.14 ಪ್ರತಿಶತ ಭಾಗವನ್ನು ಅರಿಶಿಣ ಉತ್ಪಾದನೆಗೆ ಬಳಸಲಾಗುತ್ತದೆ ಎಂದು ಸಮಯಮೂರ್ತಿ ಹೇಳಿದರು.
ಅರಿಶಿಣ ಉತ್ಪಾದನೆಗಾಗಿ ರಾಜ್ಯದಲ್ಲಿ ಪ್ರತ್ಯೇಕ ವ್ಯಾಪಾರ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಇದನ್ನು ಇ ರಾಷ್ಟ್ರೀಯ ಕೃಷಿ ಮಾರುಕಟ್ಟೆಯೊಂದಿಗೆ ಇದನ್ನು ಸಂಯೋಜಿಸಲಾಗಿದೆ ಎಂದು ಸಮಯಮೂರ್ತಿ ಹೇಳಿದ್ದಾರೆ.
ಪುರಾತನ ಕಾಲದಿಂದಲೂ ಅರಿಶಿಣಕ್ಕೆ ಔಷಧೀಯ ವಸ್ತುಗಳ ಸ್ಥಾನ ನೀಡಲಾಗಿದೆ. ಆರ್ಯುವೇದ ಕಾಲದಿಂದಲೂ ಅರಿಶಿಣವನ್ನು ಔಷಧೀಯ ವಸ್ತುವಾಗಿ ಬಳಸಲಾಗುತ್ತದೆ. ಇದಲ್ಲಿ ಕರ್ಕುಮಿನ್ ಎಂಬ ಘಟಕವು ನಂಜನ್ನು ನಾಶ ಮಾಡುವ ಗುಣವನ್ನು ಹೊಂದಿದೆ. ಅಲ್ಲದೇ ಇದೊಂದು ಅತ್ಯಂತ ಶಕ್ತಿಶಾಲಿ ಆ್ಯಂಟಿ ಆಕ್ಸಿಡಂಟ್ ಆಗಿದೆ.