ತಮಿಳುನಾಡಿನ ವಿದ್ಯಾರ್ಥಿಗಳ ತಂಡ ಶತಮಾನಗಳಷ್ಟು ಹಳೆಯದಾದ ಚೈನೀಸ್ ಪಿಂಗಾಣಿ ಪತ್ತೆ ಮಾಡಿದ್ದು, ಸಂಶೋಧನೆಗೆ ಹೊಸ ಹೊಳಹು ನೀಡಿದ್ದಾರೆ. 10ನೇ ತರಗತಿ ಐವರು ವಿದ್ಯಾರ್ಥಿಗಳು ರಾಮನಾಥಪುರಂ ಜಿಲ್ಲೆಯ ಪೊಕ್ಕನರೆಂದಲ್ ಮತ್ತು ಪಲ್ಲಪಚೇರಿಯಲ್ಲಿ ಶತಮಾನಗಳಷ್ಟು ಹಳೆಯದಾದ ಚೈನೀಸ್ ಸೆರಾಮಿಕ್ ಟೈಲ್ಸ್ ಪಿಂಗಾಣಿ ಸಾಮಾಗ್ರಿಯನ್ನು ಪತ್ತೆಮಾಡಿದ್ದು, ಇದು ತಮಿಳುನಾಡು ಮತ್ತು ಚೀನಿಯರ ನಡುವಿನ ವ್ಯಾಪಾರ ಸಂಬಂಧದ ಮತ್ತಷ್ಟು ಪುರಾವೆ ಎಂದು ಹೇಳಲಾಗುತ್ತಿದೆ.
ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ವಧು: ನೆಟ್ಟಿಗರು ಕೆಂಡ
ತಿರುಪುಲ್ಲಾಣಿ ಸರ್ಕಾರಿ ಪ್ರೌಢಶಾಲೆಯ ಹೆರಿಟೇಜ್ ಕ್ಲಬ್ನ ಐವರು ವಿದ್ಯಾರ್ಥಿಗಳಾದ ಮನೋಜ್, ರಾಮ್ಕುಮಾರ್, ಫಿಡೆಲ್ ಕ್ಯಾಸ್ಟ್ರೋ, ಅಶ್ವಿನ್ರಾಜ್ ಮತ್ತು ಬಾಲಾಜಿ ಪೊಕ್ಕನರೇಂಡಾಲ್ನ ಪಂಚಾಯತ್ ಯೂನಿಯನ್ ಪ್ರಾಥಮಿಕ ಶಾಲೆ ಬಳಿ ಮತ್ತು ಸೇತುಪತಿ ಅರಮನೆಯ ಪೂರ್ವದ ಮೈದಾನದಲ್ಲಿ ಈ ಹಳೆಯ ಸಾಮಗ್ರಿ ಕಂಡುಕೊಂಡಿದ್ದಾರೆ. ಬಳಿಕ ಅವುಗಳನ್ನು ಪುರಾತತ್ವಶಾಸ್ತ್ರಜ್ಞ ವಿ ರಾಜಗುರು ಅವರಿಗೆ ಹಸ್ತಾಂತರಿಸಿದರು.
ಶಾಲೆಯ ಪುರಾತತ್ವ ಸಂರಕ್ಷಣಾ ಮಂಡಳಿ 2010ರಿಂದ ಕಾರ್ಯನಿರ್ವಹಿಸುತ್ತಿದ್ದು ಅಲ್ಲಿ ವಿದ್ಯಾರ್ಥಿಗಳು ಶಾಸನ ಗುರುತಿಸಲು, ಅದರಲ್ಲಿನ ಅಂಶ ಓದಲು ಮತ್ತು ಲಿಪ್ಯಂತರ ಮಾಡಲು ಕಲಿಯುತ್ತಾರೆ.
ಬಿಳಿ ಪಿಂಗಾಣಿಯ ಮೇಲ್ಮೈಯನ್ನು ಕೆಂಪು, ಕಪ್ಪು, ಕಂದು, ನೀಲಿ, ಹಳದಿ ಪಟ್ಟೆ, ಹೂವು, ವಕ್ರಾಕೃತಿಗಳು ಮತ್ತು ಎಲೆಗಳ ಮಾದರಿಗಳಿಂದ ಚಿತ್ರಿಸಲಾಗಿದೆ. ಇವು ಕ್ರಿ.ಶ. 12-13ನೇ ಶತಮಾನದ ಮಧ್ಯಕಾಲೀನ ಅವಧಿಗಿಂತ ಹಿಂದಿನವು ಎಂದು ಅಂದಾಜಿಸಲಾಗಿದೆ.