ತಮಿಳುನಾಡಿನ ತಂಜಾವೂರಿನ ಮಿಷನರಿ ಶಾಲೆಯಲ್ಲಿ ಲಾವಣ್ಯ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರದೆಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಚೆನ್ನೈನ ಹೈಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದೆ. ಇಂತಾ ಸಂದರ್ಭದಲ್ಲಿ ಡಿಎಂಕೆ ಎಂಎಲ್ಎ ಮತ್ತೊಂದು ವಿವಾದ ಸೃಷ್ಟಸಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿ ನನ್ ಸಗಾಯ ಮೇರಿಗೆ 18 ದಿನಗಳ ನಂತರ ಜಾಮೀನು ಸಿಕ್ಕಿದೆ. ಈ ವೇಳೆ ಡಿಎಂಕೆ ಶಾಸಕ ಇನಿಗೋ ಇರುದಯರಾಜ್ ಅವರನ್ನು ಜೈಲಿನ ಹೊರಗೆ ಸ್ವಾಗತಿಸುತ್ತಿರುವುದು ಕಂಡುಬಂದಿತು.
ಮೇರಿಯನ್ನು ತಿರುಚಿರಾಪಳ್ಳಿಯ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಅವರಿಗೆ ಜಾಮೀನು ಸಿಕ್ಕ ನಂತರ ಅವರನ್ನ ಇರುದಯರಾಜ್ ಕಾರಾಗೃಹದ ಮುಂದೆಯೆ ಶಾಲ್ ಹೊದಿಸಿ ಸ್ವಾಗತಿಸಿದ್ದಾರೆ. ಅಷ್ಟೇ ಅಲ್ಲಾ ಆ ಫೋಟೊಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್ನಲ್ಲಿ ಹಂಚಿಕೊಂಡು, ಮೇರಿಯನ್ನು ಹೊಗಳಿದ್ದಾರೆ.
ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ನಡೆಯಿತಾ ಪ್ರೇಮಿಗಳ ದಿನಾಚರಣೆ…? ಕಾಲೇಜು ಆಡಳಿತ ಮಂಡಳಿ ನೀಡಿದೆ ಈ ಸ್ಪಷ್ಟನೆ
ತಮ್ಮ ಇಳಿವಯಸ್ಸಿನಲ್ಲೂ ಮೇರಿ ಬಡ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿದ್ದಾರೆ. ಹಳ್ಳಿಯ ಮಕ್ಕಳ ಶಿಕ್ಷಣದ ಬಗ್ಗೆ ಗಮನಹರಿಸುತ್ತಾ ಹಾಸ್ಟೆಲ್ ಒಂದರ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಇಂಥವರು ಅನಿರೀಕ್ಷಿತ ಘಟನೆಯೊಂದರ ಕಾರಣದಿಂದಾಗಿ ಬಂಧನವಾಗಿದ್ದರು. ಮೇರಿಯವರಿಗೆ ಕೋರ್ಟ್ ಜಾಮೀನು ನೀಡಿರುವುದನ್ನ ಅರಿತು, ಅವರನ್ನ ಸ್ವಾಗತಿಸಲು ಕಾರಾಗೃಹಕ್ಕೆ ಬಂದಿದ್ದೇನೆ. ನ್ಯಾಯ ಗೆದ್ದೇ ಗೆಲ್ಲುತ್ತದೆ, ನಾವು ಧಾರ್ಮಿಕ ಸೌಹಾರ್ದತೆಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
62 ವರ್ಷದ ಕ್ಯಾಥೋಲಿಕ್ ಸನ್ಯಾಸಿನಿ ಸಗಾಯಾ ಮೇರಿಗೆ ಸ್ಥಳೀಯ ನ್ಯಾಯಾಲಯವು 18 ದಿನಗಳ ನಂತರ ಜಾಮೀನು ನೀಡಿದೆ. ಅರಿಯಲೂರು ಜಿಲ್ಲೆಯ ಮೈಕಲ್‌ಪಟ್ಟಿ ಹಾಸ್ಟೆಲ್‌ನ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದರು. ಲಾವಣ್ಯ ಆತ್ಮಹತ್ಯೆಗೂ ಮುನ್ನ ಚಿತ್ರೀಕರಿಸಿದ ವಿಡಿಯೋದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ, ಸಗಾಯ ಮೇರಿ ಚಿತ್ರಹಿಂಸೆ ನೀಡಿದ್ದರೆಂದು ಹೇಳಿದ್ದಳು. ಅಂತವರನ್ನ ಎಂಎಲ್ಎ ಸ್ವಾಗತಿಸಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.