alex Certify ಜೈಲಿಂದ ಹೊರ ಬಂದ ಬೆನ್ನಲ್ಲೇ ಎಐಎಡಿಎಂಕೆ ನಾಯಕರಿಗೆ ಶಶಿಕಲಾ ಬಿಗ್ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೈಲಿಂದ ಹೊರ ಬಂದ ಬೆನ್ನಲ್ಲೇ ಎಐಎಡಿಎಂಕೆ ನಾಯಕರಿಗೆ ಶಶಿಕಲಾ ಬಿಗ್ ಶಾಕ್

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಆಪ್ತೆ ಶಶಿಕಲಾ ನಾಲ್ಕು ವರ್ಷದ ಜೈಲು ಶಿಕ್ಷೆ ಪೂರ್ಣಗೊಳಿಸಿ ಬಿಡುಗಡೆಯಾಗಿದ್ದಾರೆ. ಇದೇ ವೇಳೆ ಎಐಎಡಿಎಂಕೆ ಪಕ್ಷದ ನಾಯಕರಿಗೆ ಶಾಕ್ ನೀಡಿರುವ ಅವರು ಎಐಎಡಿಎಂಕೆ ಪಕ್ಷದ ಹೆಸರು ಮತ್ತು ಚಿಹ್ನೆಗಾಗಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಚುನಾವಣೆ ಆಯೋಗದ 2017 ರ ಆದೇಶವನ್ನು ಪ್ರಶ್ನಿಸಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಎಐಎಡಿಎಂಕೆ ಎರಡು ಎಲೆಗಳ ಚಿಹ್ನೆ ಹೊಂದಿದ್ದು, ಇದಕ್ಕಾಗಿ ಶೀಘ್ರವೇ ಕ್ಯುರೆಟಿವ್ ಪಿಟಿಷನ್ ಅರ್ಜಿ ಸಲ್ಲಿಸಲಾಗುವುದು ಎಂದು ಶಶಿಕಲಾ ಪರ ವಕೀಲ ರಾಜಾ ಸೆಂಥೂರ್ ಪಾಂಡಿಯನ್  ತಿಳಿಸಿದ್ದಾರೆ.

ಜಯಲಲಿತಾ ನಿಧನದ ನಂತರ ಎಐಎಡಿಎಂಕೆ ಎರಡು ಬಣಗಳಾಗಿದ್ದು ಶಶಿಕಲಾ ಮತ್ತು ಅವರ ಸೋದರಳಿಯ ಟಿಟಿವಿ ದಿನಕರನ್ ಅವರನ್ನು ಪಕ್ಷದಿಂದ ಹೊರ ಹಾಕಲಾಗಿತ್ತು. ನಂತರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಶಾಸಕರಾದ ದಿನಕರನ್ ಎಐಎಡಿಎಂಕೆ ಪಕ್ಷವನ್ನು ಪಡೆದುಕೊಳ್ಳಲು ಹೋರಾಟ ನಡೆಸಿದ್ದರು. ಆದರೆ, ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಬಣ ಶಶಿಕಲಾ ಅವರನ್ನು ವಾಪಸ್ ಪಕ್ಷಕ್ಕೆ ಸೇರಿಸಿಕೊಳ್ಳದಿರಲು ನಿರ್ಧರಿಸಿದೆ.

ಜೈಲಿಗೆ ಹೋಗುವ ಮೊದಲು ಪಳನಿಸ್ವಾಮಿ ಅವರನ್ನು ಶಶಿಕಲಾ ಅವರೇ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದರು. ಆಗ ಬೇರೆ ಬಣದಲ್ಲಿದ್ದ ಪನ್ನೀರ್ ಸೆಲ್ವಂ ನಂತರದಲ್ಲಿ ಪಳನಿಸ್ವಾಮಿ ಜೊತೆಗೂಡಿದ್ದಾರೆ. ಜೈಲಿಂದ ಬಿಡುಗಡೆಯಾದರೂ ತಮಿಳುನಾಡಿಗೆ ಪ್ರವೇಶಿಸದೇ ಬೆಂಗಳೂರಿನಲ್ಲೇ ತಂಗಿರುವ ಶಶಿಕಲಾ ಗ್ರ್ಯಾಂಡ್ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಶೀಘ್ರದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಶಶಿಕಲಾ ಬಿಡುಗಡೆಯಾಗಿರುವುದು ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...