ಚೆನ್ನೈ: ಸೂಕ್ತ ತರಬೇತಿಯೂ ಇಲ್ಲ, ವಿಚಾರಿಸಿದರೆ ಐಎಎಸ್, ಐಪಿಎಸ್ ಅಧಿಕಾರಿಗಳು ಎಂಬ ದರ್ಪ ಬೇರೆ ತೋರುವ ಇಬ್ಬರು ರೈಲು ಚಾಲಕರನ್ನು ಸೇಲಂ ವಿಭಾಗದ ಇರೋಡ್ ನಿಲ್ದಾಣದಿಂದ ಬಂಧಿಸಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಅಚ್ಚರಿ ಎಂದರೆ, ಬಂಧಿತರಾದ ಸಹೇಲ್ ಸಿಂಗ್ ಮತ್ತು ಇಶ್ರಾಫೀಲ್ ಸಿಂಗ್ ಬಳಿ ರೈಲ್ವೆ ಇಲಾಖೆಯ ಗುರುತಿನ ಚೀಟಿ ಕೂಡ ಇದೆ..!
2016ರಲ್ಲಿ ಇಲಾಖೆಗೆ ಸೇರಿದ್ದಾರೆ. ಆಗಿನಿಂದಲೂ ರೈಲು ಚಲಾಯಿಸುತ್ತಿದ್ದಾರೆ ಎಂದು ವಿಚಾರಣೆ ವೇಳೆ ತನಿಖೆಗೆ ಬಂದಿದೆ. ಕೊನೆಗೆ, ನೇಮಕಾತಿ ಆದೇಶ ಪತ್ರವನ್ನು ಪರಿಶೀಲಿಸಿದಾಗ, ಅದು ನಕಲಿ ಎಂದು ತಿಳಿದುಬಂದಿದೆ.
ತಂಡದಲ್ಲಿದ್ರೂ ಮೈದಾನಕ್ಕಿಳಿಯದ ಈ ಆಟಗಾರನ ಮುಂದಿನ ಕಥೆ ಏನು….?
ಇಷ್ಟೆಲ್ಲ ಆದ ಮೇಲೆ ರೈಲ್ವೆ ಅಧಿಕಾರಿಗಳಿಗೆ ತಮ್ಮ ಇಲಾಖೆಯಲ್ಲೇ ದೊಡ್ಡ ಹಗರಣವೊಂದು ತಮಗೆ ಅರಿವಿಲ್ಲದೆಯೇ ನಡೆಯುತ್ತಿರುವ ಸಂಶಯ ಮೂಡಿದೆ. ಹಾಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಬಂಧಿತರು ರೈಲು ಚಲಾಯಿಸಲು ಆರಂಭಿಸಿದ ಕೋಲ್ಕತ್ತಾ ನಿಲ್ದಾಣಕ್ಕೆ ಕರೆದೊಯ್ದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.