ಬಾಲಕಿಯರ ಆಶ್ರಯ ಗೃಹ ನಡೆಸಿಕೊಂಡು ಹೋಗುತ್ತಿರುವ 65 ವರ್ಷದ ವ್ಯಕ್ತಿಯೊಬ್ಬನನ್ನು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಮುಂದಾದ ಆರೋಪದ ಮೇಲೆ ತಮಿಳುನಾಡಿನ ಕಡಲೂರು ಪೊಲೀಸರು ಬಂಧಿಸಿದ್ದಾರೆ.
ಜೇಸುದಾಸ್ ರಾಜಾ ಹೆಸರಿನ ಈ ವ್ಯಕ್ತಿ ಜಿಲ್ಲೆಯ ವಿರುಧಾಚಲಂನಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.
ಆಶ್ರಯಗೃಹದಿಂದ 10ನೇ ಹಾಗೂ 11ನೇ ತರಗತಿಯ ಇಬ್ಬರು ಮಕ್ಕಳು ಕಾಣೆಯಾಗಿದ್ದಾರೆ ಎಂದು ಇಲ್ಲಿನ ಆಲಡಿ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 25ರಂದು ಇದೇ ಜೇಸುದಾಸ್ ದೂರು ನೀಡಿದ್ದ. ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು, ತಿರುಚ್ಚಿರಾಪಳ್ಳಿಯ ಒಲಯೂರ್ ಬಳಿ ಇಬ್ಬರಲ್ಲಿ ಒಬ್ಬಳನ್ನು ರಕ್ಷಿಸಿದ್ದು, ಮತ್ತೊಬ್ಬಳನ್ನು ಚೆನ್ನೈ ಬಳಿಯ ಪುನ್ನಮಾಲಿಯಲ್ಲಿ ರಕ್ಷಿಸಿದ್ದಾರೆ.
ಪ್ರಕರಣದಲ್ಲಿ ಮಕ್ಕಳ ಹೆಸರುಗಳು ಇರುವ ಕಾರಣ ಬಾಲಕಿಯರನ್ನು ವಿರುಧಾಚಲಂ ಮಹಿಳಾ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಈ ಬಾಲಕಿಯರ ಮೇಲೆ ರಾಜಾ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದುಬಂದಿದೆ. ವಿರುಧಾಚಲಂನ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಬಾಲಕಿಯರು ತಮ್ಮ ಹೇಳಿಕೆಗಳನ್ನು ರೆಕಾರ್ಡ್ ಮಾಡಿದ್ದಾರೆ.
150 ವರ್ಷಗಳ ಹಿಂದೆಯೇ ಹವಾಮಾನ ಬದಲಾವಣೆ ಬಗ್ಗೆ ಎಚ್ಚರಿಸಿದ್ದ ವಿಜ್ಞಾನಿ
ಆಶ್ರಯಗೃಹದಲ್ಲಿ ಸ್ನಾನಗೃಹ ವ್ಯವಸ್ಥೆ ಇದ್ದರೂ ಸಹ ಬಾಲಕಿಯರಿಗೆ ಹೊರಗಡೆಯೇ ಸ್ನಾನ ಮಾಡಲು ಹೇಳುತ್ತಿದ್ದ ರಾಜಾ, ತಾವು ಸ್ನಾನ ಮಾಡುವುದನ್ನು ನೋಡುತ್ತಿದ್ದ ಎಂದು ಬಾಲಕಿಯರು ತಿಳಿಸಿದ್ದಾರೆ.
ಮ್ಯಾಜಿಸ್ಟ್ರೇಟ್ ನಿರ್ದೇಶನದಂತೆ ರಾಜಾ ವಿರುದ್ಧ ಪೋಕ್ಸೋ ಕಾಯಿದೆಯ 11ನೇ ವಿಧಿ (ಲೈಂಗಿಕ ಕಿರುಕುಳ) ಹಾಗೂ 12ನೇ ವಿಧಿ (ಲೈಂಗಿಕ ಕಿರುಕುಳಕ್ಕೆ ಶಿಕ್ಷೆ) ಪ್ರಕರಣ ದಾಖಲಿಸಲಾಗಿದೆ ಎಂದು ಸಬ್‌ಇನ್ಸ್‌ಪೆಕ್ಟರ್ ಪ್ರಂಥಮನ್ ತಿಳಿಸಿದ್ದಾರೆ.
ಡಯಾಬಿಟಿಕ್ ಆಗಿರುವ ಆಪಾದಿತ ಇತ್ತೀಚೆಗೆ ಹೃದಯ ಚಿಕಿತ್ಸೆಗೂ ಒಳಗಾಗಿದ್ದು, ಆತನನ್ನು ಕಡಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಫಿಟ್ನೆಸ್ ಪ್ರಮಾಣ ಪತ್ರ ಸಿಗುತ್ತಲೇ ರಾಜನನ್ನು ಜೈಲಿಗೆ ಕರೆತರಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.