ಸಾವು ಬರುವುದು ಖಚಿತವಾದರೂ ಯಾವ ರೂಪದಲ್ಲಿ ಯಾವ ರೀತಿ ಯಾವಾಗ ಬರುತ್ತೋ ಹೇಳಲಾಗುವುದಿಲ್ಲ. ಇದಕ್ಕೆ ಈಗಾಗಲೇ ಹಲವಾರು ಉದಾಹರಣೆಗಳಿರೋ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಕೆಲವೇ ಕ್ಷಣಗಳ ಹಿಂದೆ ನಗುನಗುತ್ತಾ ಮಾತನಾಡಿದ್ದವರು ಮರುಕ್ಷಣವೇ ಇಲ್ಲ ಎಂಬುದು ಅರಗಿಸಿಕೊಳ್ಳಲಾಗದ ಸಂಗತಿಯಾಗುತ್ತದೆ. ಈಗ ಅಂತಹುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾವು ಹೀಗೂ ಬರುತ್ತಾ ಎಂಬ ಅಚ್ಚರಿ ಮೂಡಿಸಿದೆ.
ಈ ಘಟನೆ ತಮಿಳುನಾಡಿದನ ಶ್ರೀಪೆರಂಬೂದೂರಿನಲ್ಲಿ ನಡೆದಿದ್ದು, ಮುರಳಿ ಎಂಬ 45 ವರ್ಷದ ರಿಕ್ಷಾ ಚಾಲಕ ತನ್ನ ಕರ್ತವ್ಯ ಮುಗಿಸಿಕೊಂಡು ಮನೆಗೆ ಅಗತ್ಯ ಸಾಮಾಗ್ರಿಗಳನ್ನು ತೆಗೆದುಕೊಂಡು ನಡೆದುಕೊಂಡು ಹೋಗುತ್ತಿರುತ್ತಾರೆ.
ಈ ವೇಳೆ ಟ್ರಕ್ ಒಂದರಿಂದ ಕಳಚಿಕೊಂಡ ಟೈಯರ್ ಮುರಳಿಗೆ ಹಿಂದಿನಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದು, ಕುಸಿದು ಬಿದ್ದ ಮುರಳಿಯನ್ನು ಕೂಡಲೇ ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ.