
ವೃತ್ತಿಯಲ್ಲಿ ಛಾಯಾಗ್ರಾಹಕರಾಗಿರುವ 49 ವರ್ಷದ ದುರೈ ವರ್ಮ ಹಾಗೂ ಅವರ ಪುತ್ರಿ 13 ವರ್ಷದ ಮೋಹನಾ ಪ್ರೀತಿ ಮೃತಪಟ್ಟವರಾಗಿದ್ದು, ಇವರುಗಳು ಎರಡು ದಿನಗಳ ಹಿಂದಷ್ಟೇ ಖರೀದಿಸಿದ್ದ ಎಲೆಕ್ಟ್ರಿಕ್ ಸ್ಕೂಟರನ್ನು ಚಾರ್ಜ್ ಮಾಡುವ ಸಲುವಾಗಿ ಮನೆಯಲ್ಲಿಯೇ ಚಾರ್ಜಿಂಗ್ ಗೆ ಹಾಕಿದ್ದರು ಎನ್ನಲಾಗಿದೆ.
ಚಾರ್ಜ್ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಇವರುಗಳು ಸ್ಕೂಟರ್ ಬಳಿ ಹೋದಾಗ ಅದು ಸ್ಫೋಟಿಸಿದೆ. ಇದರ ಪರಿಣಾಮವಾಗಿ ಇಬ್ಬರೂ ಸಹ ಸಜೀವವಾಗಿ ದಹನಗೊಂಡಿದ್ದಾರೆ.