alex Certify 10 ರೂ. ನಾಣ್ಯದ ರಾಶಿ ಸುರಿದು 6 ಲಕ್ಷ ರೂಪಾಯಿ ಮೌಲ್ಯದ ಕಾರು ಖರೀದಿಸಿದ ಯುವಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ರೂ. ನಾಣ್ಯದ ರಾಶಿ ಸುರಿದು 6 ಲಕ್ಷ ರೂಪಾಯಿ ಮೌಲ್ಯದ ಕಾರು ಖರೀದಿಸಿದ ಯುವಕ..!

ಇದು ಕೆಲವು ತಿಂಗಳ ಹಿಂದಿನ ಮಾತು. ಚೆನ್ನೈನ ಯುವಕನೊಬ್ಬ ತನ್ನ ಡ್ರೀಮ್ ಬೈಕ್ ಖರೀದಿಸಲು ರಾಶಿ ರಾಶಿ ಒಂದೊಂದು ರೂಪಾಯಿ ನಾಣ್ಯ ಹೊತ್ತುಕೊಂಡು ಬೈಕ್ ಶೋ ರೂಮ್​ಗೆ ಬರುತ್ತಾನೆ. ಅಲ್ಲಿದ್ದ ಸಿಬ್ಬಂದಿಗಳು ಅದನ್ನ 10 ಗಂಟೆ ಲೆಕ್ಕ ಹಾಕಿದಾಗ ಅದು 2.6 ಲಕ್ಷ ರೂಪಾಯಿ ಮೌಲ್ಯದ 1‌ ರೂಪಾಯಿ ನಾಣ್ಯವಾಗಿತ್ತು.

ಕೊನೆಗೆ ಅಷ್ಟೇ ಮೌಲ್ಯದ ಬಜಾಜ್ ಡೊಮಿನಾರ್ ಬೈಕ್​ನ್ನ ಆತ ಖರೀದಿಸುತ್ತಾನೆ. ಈಗ ಮತ್ತೆ ಅಂಥಹದ್ದೇ ಒಂದು ಘಟನೆ, ತಮಿಳುನಾಡಿನ ಧರ್ಮಪುರಿಯ ಅರೂರ್​ನಲ್ಲಿ ನಡೆದಿದೆ. ಇಲ್ಲಿ ಒಬ್ಬ ವ್ಯಕ್ತಿ 10 ರೂಪಾಯಿ ನಾಣ್ಯವನ್ನ 5-6 ಚೀಲದಲ್ಲಿ ತುಂಬಿಕೊಂಡು ಕಾರ್ ಶೋ ರೂಮ್​ಗೆ ಬಂದು ಕಾರ್ ಖರೀದಿಸಿದ್ದಾನೆ.

ಧರ್ಮಪುರಿಯಲ್ಲಿರುವ ಪ್ರಸಿದ್ಧ ಕಾರ್ ಶೋ ರೂಮ್ ಅದು. ಅಲ್ಲಿ ಕಾರ್​ ಖರೀದಿಗೆ ಬರೋರು ಚೆಕ್​ ಇಲ್ಲಾ, ಕ್ಯಾಶ್​ ಹಿಡಿದುಕೊಂಡು ಬರೋರೆ ಹೆಚ್ಚು. ಆದರೆ ವೆಟ್ರಿಯಲ್ ಅನ್ನೊ ವ್ಯಕ್ತಿ ಚೀಲಗಳಲ್ಲಿ 10 ರೂಪಾಯಿ ನಾಣ್ಯವನ್ನ ತುಂಬಿಕೊಂಡು ಬಂದಿದ್ದಾರೆ.

ಚೀಲದಲ್ಲಿರುವ 10 ರೂಪಾಯಿ ನಾಣ್ಯದ ರಾಶಿಯನ್ನ ಕಾರ್ ಶೋ ರೂಮ್ ಮಾಲೀಕರ ಮುಂದೆ ಸುರಿದಿದ್ದಾನೆ. ಕೊನೆಗೆ ತನಗೆ ಇಷ್ಟವಾದ ಕಾರ್ ಕೊಂಡುಕೊಳ್ಳಲು ಮುಂದಾಗಿದ್ದಾನೆ. ವೆಟ್ರಿಯಲ್​ ಈ ನಡೆಗೆ ಕೊಂಚ ಮಟ್ಟಿಗೆ ಕಾರ್ ಶೋ ರೂಮ್​​ನವರು ಕನ್ಫ್ಯೂಸ್​ ಆಗಿದ್ದಾರೆ. ಆದರೆ ಹೀಗೆ ಮಾಡುವುದರ ಹಿಂದೆ ಇರೋ ಅಸಲಿ ಉದ್ದೇಶ ಗೊತ್ತಾದ ಮೇಲೆ ಅವರು ಆ ನಾಣ್ಯವನ್ನ ಲೆಕ್ಕ ಹಾಕಿದ್ದಾರೆ. ಅದು 6 ಲಕ್ಷ ಮೌಲ್ಯದ 10 ರೂಪಾಯಿ ನಾಣ್ಯವಾಗಿತ್ತು.

BIG NEWS: ನಾಜಿ ಸಾಮ್ರಾಜ್ಯ ಜಾರಿಗೆ ತರಲು ಅಗ್ನಿವೀರರ ತಯಾರಿ; ಇದು ಆರ್ಮಿ ಯೋಜನೆಯಲ್ಲ RSS ’ಅಗ್ನಿಪಥ್’; HDK ವಾಗ್ದಾಳಿ

ಅಸಲಿಗೆ ವೆಟ್ರಿಯಲ್ ತಾಯಿ ಒಂದು ಪುಟ್ಟ ಅಂಗಡಿ ನಡೆಸುತ್ತಾರೆ. ಅಂಗಡಿಗೆ ಬರುವ ಗ್ರಾಹಕರು 10 ರೂಪಾಯಿ ನಾಣ್ಯ ಕೊಟ್ಟಾಗೆಲ್ಲ ತಿರಸ್ಕರಿಸುತ್ತಿದ್ದರು. ಬ್ಯಾಂಕ್​ನವರಿಗೆ ಕೊಟ್ಟರೂ ಅವರೂ 10 ರೂಪಾಯಿ ನಾಣ್ಯ ಬೇಡ ಅಂತ ಹೇಳುತ್ತಿದ್ದರು. ಇದರಿಂದ ಮನೆಯಲ್ಲಿ ಒಂದು ರಾಶಿ 10 ರೂಪಾಯಿ ನಾಣ್ಯ ಸಂಗ್ರಹವಾಗಿದ್ದವು. ಮಕ್ಕಳು ಕೆಲವೊಮ್ಮೆ ಆ ನಾಣ್ಯಗಳನ್ನ ಆಟ ಆಡುವುದಕ್ಕೆ ಬಳಸಿಕೊಳ್ಳೊರು. ಇದೆಲ್ಲ ವೆಟ್ರಿಯಲ್ ಸೂಕ್ಷ್ಮವಾಗಿ ಗಮನಿಸಿದ್ದರು. 10 ರೂಪಾಯಿ ನಾಣ್ಯ ಚಲಾವಣೆಗೆ ಯೋಗ್ಯ ಅಂತ RBI ಹೇಳಿದೆ. ಆದರೂ ಜನರು ಇದನ್ನ ಬಳಸುವುದಕ್ಕೆ ಹಿಂಜರಿಯುತ್ತಾರೆ. ಇದೇ ಕಾರಣಕ್ಕೆ ಒಂದು ತಿಂಗಳಿನಿಂದ 10 ರೂಪಾಯಿ ನಾಣ್ಯವನ್ನ ಒಟ್ಟು ಹಾಕಿ, ಜನರಿಗೆ ಜಾಗೃತಿ ಉಂಟಾಗಲಿ ಅಂತ ಉದ್ದೇಶದಿಂದಲೇ ಕಾರ್ ಒಂದನ್ನ ಖರೀದಿಸಿದ್ದಾರೆ. ಕಾರ್ ಶೋ ರೂಮ್​ನವರು ಕೂಡಾ ವೆಟ್ರಿಯಲ್ ಅವರ ಉದ್ದೇಶ ನೋಡಿ, ಅವರು 6 ಲಕ್ಷ ರೂಪಾಯಿ ಮೌಲ್ಯದ 10 ರೂಪಾಯಿ ನಾಣ್ಯ ಇಟ್ಟುಕೊಂಡು ಅವರಿಷ್ಟದ ಕಾರ್​ನ್ನ ಅವರಿಗೆ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...