ರಿವರ್ಸ್ ಗೇರ್ನಲ್ಲಿ ಕಾರು ಓಡಿಸುವುದು ಅಷ್ಟು ಸಲೀಸಲ್ಲ. ಆದರೆ, ಇದನ್ನು ಸಾಹಸ ಮಾಡಿಕೊಂಡವರು ಅಥವಾ ದಾಖಲೆ ನಿರ್ಮಿಸಲು ಈ ಪ್ರಯತ್ನದಲ್ಲಿ ಒಂದಷ್ಟು ಮಂದಿ ಇದ್ದೇ ಇದ್ದಾರೆ.
ತಮಿಳುನಾಡಿನ ಸೇಲಂ ಜಿಲ್ಲೆಯ 35 ವರ್ಷದ ವ್ಯಕ್ತಿ ತನ್ನ ಕಾರನ್ನು ರಿವರ್ಸ್ ಗೇರ್ನಲ್ಲಿ 29 ನಿಮಿಷಗಳಲ್ಲಿ 16 ಕಿಲೋಮೀಟರ್ ಓಡಿಸಿ ದಾಖಲೆ ನಿರ್ಮಿಸಿದ್ದಾರೆ.
35 ವರ್ಷದ ಚಂದ್ರಮೌಳಿ ಎಡಪ್ಪಾಡಿ ವಿಧಾನಸಭಾ ಕ್ಷೇತ್ರದ ಭಾಗವಾಗಿರುವ ಸೇಲಂ ಜಿಲ್ಲೆಯ ಜಲಗಂದಪುರಂ ಪುರಸಭೆಯ ಮೂಲದ ಭೂಪತಿ ಎಂಬ ನೇಕಾರರ ಪುತ್ರ. ವಾಹನ ಚಾಲನೆಯಲ್ಲಿ ವಿಶೇಷ ಉತ್ಸಾಹ ಹೊಂದಿದ್ದ ಚಂದ್ರಮೌಳಿ, ಸಂಚಾರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಹೊಸ ಸಾಧನೆಗೆ ಪ್ರಯತ್ನಿಸುತ್ತಿದ್ದರು.
ಕಳೆದ ವಾರ ಎಡಪ್ಪಾಡಿ ಬೈಪಾಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತ ರೆಫರಿ ವಕೀಲ ಕುಮಾರ್ ಸಮ್ಮುಖದಲ್ಲಿ 29 ನಿಮಿಷ 10 ಸೆಕೆಂಡ್ಗಳಲ್ಲಿ 16 ಕಿಲೋಮೀಟರ್ 140 ಮೀಟರ್ ದೂರವನ್ನು ಹಿಮ್ಮುಖವಾಗಿ ಓಡಿಸಿದ್ದಾರೆ.
ಕಾರಿನಲ್ಲಿ 30 ನಿಮಿಷದಲ್ಲಿ 14.2 ಕಿ.ಮೀ ದೂರವನ್ನು ರಿವರ್ಸ್ ಗೇರ್ನಲ್ಲಿ ಓಡಿಸಿದ ಕೇರಳದ ಪತ್ತನಂತಿಟ್ಟದ 22 ವರ್ಷದ ಟೆಸನ್ ಥಾಮಸ್ ಅವರ ಹಿಂದಿನ ದಾಖಲೆಯನ್ನು ಹಿಂದಿಕ್ಕುವ ಮೂಲಕ ಚಂದ್ರಮೌಳಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಗಿನ್ನೆಸ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರಕಾರ, ಬ್ರಿಯಾನ್ ‘ಕಬ್’ ಕೀನ್ ಮತ್ತು ಜೇಮ್ಸ್ ‘ವಿಲ್ಬರ್’ ರೆೈಟ್ ಜೋಡಿ -ತಮ್ಮ ಷೆವರ್ಲೆ ಬ್ಲೇಜರ್ ಅನ್ನು 1984 ರ ಆಗಸ್ಟ್ 1ರಿಂದ ಸೆಪ್ಟೆಂಬರ್ 6 ರ ನಡುವೆ 37 ದಿನಗಳಲ್ಲಿ 14,534 ಕಿಮೀ ಹಿಮ್ಮುಖವಾಗಿ ಓಡಿಸಿದರು.