ಚೆನ್ನೈ: ಪತ್ನಿಯ ಅನೈತಿಕ ಸಂಬಂಧದ ವಿಚಾರ ತಿಳಿದು ಆಕೆಯ ಪ್ರಿಯಕರನನ್ನು ಹತ್ಯೆಗೈದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ತಿರುಪುರ್ ಜಿಲ್ಲೆಯ ವೇಲಂಪಾಳ್ಯಂನಲ್ಲಿ ಆರೋಪಿ 45 ವರ್ಷದ ಶಶಿಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಶಶಿಕುಮಾರ್ ತನ್ನ ಪತ್ನಿ ಪ್ರಿಯಾ ಮತ್ತು ಇಬ್ಬರು ಪುತ್ರಿಯರೊಂದಿಗೆ ತಿರುಪುರ್ ನಗರದಲ್ಲಿ ವಾಸವಾಗಿದ್ದಾನೆ.
ಗಂಡ ಮತ್ತು ಹೆಂಡತಿ ಬನಿಯನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಪ್ರಿಯಾ ತನ್ನ ಸಹೋದ್ಯೋಗಿ ತಮಿಳರಸನ್ ಜೊತೆ ಒಂದು ವರ್ಷದಿಂದ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.
ಈ ವಿಚಾರ ತಿಳಿದ ಶಶಿಕುಮಾರ್, ಸಂಬಂಧ ಕಡಿದುಕೊಳ್ಳುವಂತೆ ತಾಕೀತು ಮಾಡಿದ್ದ. ಪ್ರಿಯಾ ಅವರ ಪ್ರಿಯಕರ ತಮಿಳರಸನ್ ತನ್ನ ತಾಯಿ, ಇಬ್ಬರು ಪುತ್ರರು ಮತ್ತು ಕಿರಿಯ ಸಹೋದರನೊಂದಿಗೆ ವೆಲಂಪಾಳ್ಯಂನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಪತ್ನಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು.
ಪ್ರಿಯಾ ಆಗಾಗ್ಗೆ ತಮಿಳರಸನ್ ಮನೆಗೆ ಭೇಟಿ ನೀಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಶಿಕುಮಾರ್ ತನ್ನ ಪತ್ನಿಯ ಪ್ರಿಯಕರನನ್ನು ಕೊಲೆ ಮಾಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.