ಚೆನ್ನೈ: ವಿಮಾನ ಪ್ರಯಾಣಿಕರೊಬ್ಬರಿಂದ 1.70 ಕೋಟಿ ರೂ.ಗಳ ಎರಡು ಐಷಾರಾಮಿ ಕೈಗಡಿಯಾರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ತಿಳಿಸಿದೆ.
ಫೆಬ್ರವರಿ 5 ರಂದು ಹಾಂಗ್ ಕಾಂಗ್ನಿಂದ ಆಗಮಿಸಿದ ಪ್ರಯಾಣಿಕನನ್ನು ಇಲಾಖೆಯ ಅಧಿಕಾರಿಗಳು ಅನುಮಾನದ ಮೇಲೆ ಪರಿಶೀಲಿಸಿದ್ದಾರೆ.
ಪರಿಶೀಲನೆ ನಡೆಸಿದ ಅಧಿಕಾರಿಗಳು ಆತನ ಲಗೇಜಿನಲ್ಲಿ ಬಚ್ಚಿಟ್ಟಿದ್ದ 1.7 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ವಾಚ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಯಾಣಿಕ ಹಣಕ್ಕಾಗಿ ಇನ್ನೊಬ್ಬ ವ್ಯಕ್ತಿಗೆ ಕೈಗಡಿಯಾರಗಳನ್ನು ತಲುಪಿಸಬೇಕಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಪ್ರಯಾಣಿಕನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಪ್ರಧಾನ ಆಯುಕ್ತ ಆರ್. ಶ್ರೀನಿವಾಸ ನಾಯ್ಕ್ ಅವರು ಶನಿವಾರ ತಿಳಿಸಿದ್ದಾರೆ.