alex Certify ʼಸಿಂಗಂʼ ಸ್ಟೈಲ್‌ ನಲ್ಲಿ ಮೀಸೆ ಬಿಟ್ಟಿದ್ದ ಪೊಲೀಸ್‌ ಸಿಬ್ಬಂದಿ ವಿರುದ್ದ ನ್ಯಾಯಾಧೀಶರು ಗರಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸಿಂಗಂʼ ಸ್ಟೈಲ್‌ ನಲ್ಲಿ ಮೀಸೆ ಬಿಟ್ಟಿದ್ದ ಪೊಲೀಸ್‌ ಸಿಬ್ಬಂದಿ ವಿರುದ್ದ ನ್ಯಾಯಾಧೀಶರು ಗರಂ

ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದ ಸೂರ್ಯ ನಟಿಸಿರುವ ʼಸಿಂಗಂʼ ಚಿತ್ರದಲ್ಲಿ ಮೀಸೆ ಚಿತ್ರಪ್ರೇಮಿಗಳ ಗಮನ ಸೆಳೆದಿತ್ತು. ಆದರೆ, ನ್ಯಾಯಾಲಯಕ್ಕೆ ಈ ಶೈಲಿ ಇಷ್ಟವಾದಂತೆ ಕಾಣಿಸಿಲ್ಲ.

ತಮಿಳುನಾಡಿನ ನೀಲಗಿರಿಯಲ್ಲಿ ನಡೆದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ʼಸಿಂಗಂ’ ಮೀಸೆ ಹೊಂದಿರುವ ಪೊಲೀಸ್​ ಸಿಬ್ಬಂದಿಗೆ ಜಿಲ್ಲಾ ನ್ಯಾಯಾಧೀಶರು ಛೀಮಾರಿ ಹಾಕಿ, ಮೀಸೆಯನ್ನು ʼಸರಿಯಾದ’ ರೀತಿಯಲ್ಲಿ ಟ್ರಿಮ್​ ಮಾಡಿಕೊಂಡು ಬರಲು ಸೂಚನೆ ನೀಡಿದ ಪ್ರಸಂಗ ನಡೆದಿದೆ.

ಗುಡಲೂರಿಗೆ ಸಮೀಪವಿರುವ ನೀಲಗಿರಿ ಜಿಲ್ಲೆಯ ಅಂಬಲಮೂಲ ಪೊಲೀಸ್​ ಠಾಣೆಯ ಸಿಬ್ಬಂದಿ ರಾಜೇಶ್​ ಕಣ್ಣನ್​ ಅವರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಊಟಿಯಲ್ಲಿರುವ ನೀಲಗಿರಿ ಜಿಲ್ಲಾ ಸೆಷನ್ಸ್​ ನ್ಯಾಯಾಲಯದಲ್ಲಿ ನ್ಯಾಯಾಧೀಶ ಮುರುಗನ್​ ಅವರ ಮುಂದೆ ಹಾಜರಾಗಿ ವಿವರಣೆಯನ್ನು ನೀಡಿದರು. ಆ ಸಮಯದಲ್ಲಿ ಪೊಲೀಸ್​ ರಾಜೇಶ್​ ಕಣ್ಣನ್​ ಅವರು ತಮಿಳಿನ ʼಸಿಂಗಂʼ ಚಿತ್ರದ ನಾಯಕ ನಟ ಸೂರ್ಯ ಅವರಂತೆಯೇ ಮೀಸೆ ಬಿಟ್ಟಿದ್ದರು.

ನ್ಯಾಯಾಧೀಶ ಮುರುಗನ್​ ಆ ಪೊಲೀಸ್​ ಸಿಬ್ಬಂದಿಯ ಮೀಸೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಉನ್ನತ ಅಧಿಕಾರಿಗಳಿಗೆ ಮೀಸೆಯ ಪ್ರೋಟೋಕಾಲ್​ಗಳ ಬಗ್ಗೆ ಸರಿಯಾಗಿ ತಿಳಿಸಲಾಗಿದೆಯೇ? ಎಂದು ಎಂದು ಪ್ರಶ್ನೆ ಹಾಕಿದರು. ನ್ಯಾಯಾಧೀಶರ ಪ್ರತಿಕ್ರಿಯೆಯಿಂದ ಕಣ್ಣನ್​ ಒಮ್ಮೆಲೆ ಗಾಬರಿಯಾದರು ಎಂದು ವರದಿಯಾಗಿದೆ. ನಂತರ ಅವರು ನ್ಯಾಯಾಲಯಕ್ಕೆ ಹಿಂದಿರುಗುವ ಮೊದಲು ತಮ್ಮ ಮೀಸೆಯನ್ನು ಸೂಕ್ತವಾಗಿ ಟ್ರಿಮ್​ ಮಾಡಲು ಹತ್ತಿರದ ಸಲೂನ್​ಗೆ ತೆರಳಿದ್ದಾರೆ.

ನಂತರ ಇದು ಪೊಲೀಸ್​ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಸಾಮಾನ್ಯವಾಗಿ ಪೊಲೀಸ್​ ಇಲಾಖೆಗೆ ಸೇರುವವರು, ಇಲಾಖೆಗೆ ಪ್ರವೇಶಿಸುವಾಗ ನಮ್ಮ ಗುರುತಿನ ಚೀಟಿಯಲ್ಲಿರುವಂತೆ ನೋಟವನ್ನು ಕಾಪಾಡಿಕೊಳ್ಳಬೇಕು. ಹೆಚ್ಚುವರಿಯಾಗಿ, ಇತರ ಸಂದರ್ಭಗಳಲ್ಲಿ, ಯಾವುದೇ ಪೊಲೀಸರು​ ದೇವಸ್ಥಾನದಲ್ಲಿ‌ ಮುಡಿಕೊಡಲು ಅಥವಾ ದಪ್ಪ ಮೀಸೆಯನ್ನು ಬೆಳೆಸಲು ನಿರ್ಧರಿಸಿದರೆ ಉನ್ನತ ಅಧಿಕಾರಿಗಳಿಗೆ ತಿಳಿಸಬೇಕು. ಉನ್ನತ ಅಧಿಕಾರಿಗಳ ಅನುಮತಿಯಿಲ್ಲದೆ, ತಮಿಳುನಾಡು ಪೊಲೀಸ್​ ಇಲಾಖೆಯ ಪ್ರೋಟೋಕಾಲ್​ಗಳ ಪ್ರಕಾರ ಪೊಲೀಸರು ತಮ್ಮ ಗುರುತನ್ನು ಬದಲಾಯಿಸಲು ಅನುಮತಿಸಲಾಗುವುದಿಲ್ಲ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...