ಸೇತು ಸಮುದ್ರ ಯೋಜನೆಗಾಗಿ ರಾಮ ಸೇತುವೆಯನ್ನು ತೆರವು ಮಾಡಬೇಕು ಎಂಬ ಹೇಳಿಕೆಗಳ ಕಾರಣಕ್ಕೆ ತಮಿಳುನಾಡಿನಲ್ಲಿ ಈಗಾಗಲೇ ವಿವಾದ ಸೃಷ್ಟಿಯಾಗಿದ್ದು, ಇದೀಗ ಡಿಎಂಕೆ ಸಂಸದರೊಬ್ಬರು ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ.
ಶುಕ್ರವಾರದಂದು ಮಧುರೈನಲ್ಲಿ ಸೇತುಸಮುದ್ರ ಯೋಜನೆಗೆ ಬೆಂಬಲ ಸೂಚಿಸಿ ನಡೆದ ಸಭೆಯಲ್ಲಿ ಮಾತನಾಡಿದ ಸಂಸದ ಟಿ.ಆರ್. ಬಾಲು, ನನ್ನ ಲೋಕಸಭಾ ಕ್ಷೇತ್ರದಲ್ಲಿ ರಸ್ತೆ ನಿರ್ಮಾಣದ ಹಾದಿಯಲ್ಲಿದ್ದ ನೂರು ವರ್ಷಗಳಿಗೂ ಹಳೆಯ ದೇವಸ್ಥಾನಗಳನ್ನು ದ್ವಂಸ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಈ ದೇವಸ್ಥಾನಗಳನ್ನು ತೆರವುಗೊಳಿಸಿದರೆ ಮತ ಗಳಿಕೆ ಕಡಿಮೆಯಾಗಬಹುದು ಎಂದು ನನ್ನ ಬೆಂಬಲಿಗರು ಹೇಳಿದ್ದರು. ಆದರೆ ಅದನ್ನು ಲೆಕ್ಕಿಸದೆ ರಸ್ತೆ ನಿರ್ಮಾಣಕ್ಕಾಗಿ ಲಕ್ಷ್ಮಿ, ಸರಸ್ವತಿ ಮತ್ತು ಪಾರ್ವತಿ ದೇವಿಗೆ ಸೇರಿದ ದೇವಾಲಯಗಳನ್ನು ಒಡೆಯಲಾಯಿತು ಎಂದು ಹೇಳಿದ್ದಾರೆ.