ನವದೆಹಲಿ: ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಕಾಂಗ್ರೆಸ್ ಪಕ್ಷಕ್ಕೆ ಮೇಜರ್ ಸರ್ಜರಿ ಮಾಡಲಾಗಿದೆ. ಪಕ್ಷದ ಸಮಿತಿಯನ್ನು ಪುನರ್ ರಚಿಸಲಾಗಿದೆ. ದೊಡ್ಡಗಾತ್ರದ ಸಮಿತಿಯನ್ನು ರಚಿಸಿರುವುದಕ್ಕೆ ಪಕ್ಷದ ಸಂಸದ ಕಾರ್ತಿ ಚಿದಂಬರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂತಹ ದೊಡ್ಡ ಗಾತ್ರದ ಸಮಿತಿಗಳನ್ನು ರಚಿಸುವುದರಿಂದ ಪಕ್ಷಕ್ಕೆ ಲಾಭವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿಗೆ 32 ಉಪಾಧ್ಯಕ್ಷರು, 57 ಪ್ರಧಾನ ಕಾರ್ಯದರ್ಶಿಗಳು ಮತ್ತು 104 ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. 56 ಜನರ ಕಾರ್ಯಕಾರಣಿ ಸಮಿತಿ, 24 ಸದಸ್ಯರ ಚುನಾವಣಾ ಸಮಿತಿ, ಇದರೊಂದಿಗೆ ಚುನಾವಣಾ ಸಮನ್ವಯ ಸಮಿತಿ ಕೂಡ ರಚನೆ ಮಾಡಲಾಗಿದೆ.
ಹೀಗೆ ಭಾರಿ ಗಾತ್ರದ ಸಮಿತಿಯನ್ನು ರಚಿಸಿರುವುದಕ್ಕೆ ಕಾರ್ತಿ ಚಿದಂಬರಂ ಆಕ್ಷೇಪಿಸಿದ್ದು, ಇಂತಹ ಸಮಿತಿಗಳಿಂದ ಪ್ರಯೋಜನವಿಲ್ಲ. ಇದರಿಂದ ಉದ್ದೇಶ ಈಡೇರುವುದಿಲ್ಲ. ಸಮಿತಿಗಳಲ್ಲಿ ಇರುವವರಿಗೆ ಯಾವುದೇ ಹೊಣೆಗಾರಿಕೆ ಇಲ್ಲವೆಂದು ಹೇಳಿದ್ದಾರೆ.