alex Certify ಪೆರಿಯಾರ್​ ಜನ್ಮದಿನಾಚರಣೆಯನ್ನು ʼಸಾಮಾಜಿಕ ನ್ಯಾಯ ದಿನʼವೆಂದು ಘೋಷಿಸಿದ ತಮಿಳುನಾಡು ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೆರಿಯಾರ್​ ಜನ್ಮದಿನಾಚರಣೆಯನ್ನು ʼಸಾಮಾಜಿಕ ನ್ಯಾಯ ದಿನʼವೆಂದು ಘೋಷಿಸಿದ ತಮಿಳುನಾಡು ಸರ್ಕಾರ

ಸಮಾಜ ಸುಧಾರಕ ಪೆರಿಯಾರ್​ ಜನ್ಮದಿನವನ್ನು ಸಾಮಾಜಿಕ ನ್ಯಾಯ ದಿನವನ್ನಾಗಿ ಆಚರಿಸಲಾಗುವುದು ಎಂಬ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್​ರ ಘೋಷಣೆಯು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಇಂದು ರಾಮಸಾಮಿ ಪೆರಿಯಾರ್​ ಜನ್ಮದಿನಾಚರಣೆಯಾಗಿದ್ದು ಇಂದಿನಿಂದ ಮುಂದಿನ ಪೆರಿಯಾರ್​ ಜನ್ಮ ದಿನಾಚರಣೆಯ ದಿನವನ್ನು ಸಾಮಾಜಿಕ ನ್ಯಾಯ ದಿನ ಎಂದು ಪರಿಗಣಿಸಲಾಗುತ್ತದೆ ಎಂದು ಸ್ಟಾಲಿನ್​ ಹೇಳಿದ್ದಾರೆ.

ಇ.ವಿ. ರಾಮಸಾಮಿ ಪೆರಿಯಾರ್​ ಸಿದ್ಧಾಂತಗಳು ಸಾಮಾಜಿಕ ನ್ಯಾಯ, ಸ್ವಾಭಿಮಾನ, ವೈಚಾರಿಕತೆ, ಸಮಾನತೆ ಹಾಗೂ ಸಹೋದರತ್ವವನ್ನು ಬಿಂಬಿಸುತ್ತದೆ. ಪೆರಿಯಾರ್​ ಸಿದ್ಧಾಂತಗಳೇ ತಮಿಳು ಸಮಾಜದ ಅಭಿವೃದ್ಧಿಗಳಿಗೆ ಅಡಿಪಾಯ ಹಾಕಿದೆ ಎಂದು ಸ್ಟಾಲಿನ್ ಹೇಳಿದ್ರು.

ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್​ರ ಈ ಘೋಷಣೆಯನ್ನು ಖಂಡಿಸಿರುವ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಎಂ.ಕೆ. ಸ್ಟಾಲಿನ್​, ಡಿಎಂಕೆ ಸರ್ಕಾರವು ಇತರೆ ಸುಧಾರಣಾವಾದಿಗಳನ್ನು ಬದಿಗೊತ್ತಿದೆ ಎಂದು ಕಿಡಿಕಾರಿದರು.

ಪೆರಿಯಾರ್​​ರ ಜೊತೆಗೆ ಡಿಎಂಕೆ ಸರ್ಕಾರವು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಸುಬ್ರಹ್ಮಣ್ಯ ಭಾರತಿಯವರಂತವರನ್ನೂ ಗೌರವಿಸಬೇಕು ಎಂದು ಅಣ್ಣಾಮಲೈ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...