alex Certify ನಿವೃತ್ತಿಯ ಕೊನೆ ದಿನದಂದು ಬಸ್ ಗೆ ಮುತ್ತಿಟ್ಟ ಚಾಲಕ; ಭಾವನಾತ್ಮಕ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿವೃತ್ತಿಯ ಕೊನೆ ದಿನದಂದು ಬಸ್ ಗೆ ಮುತ್ತಿಟ್ಟ ಚಾಲಕ; ಭಾವನಾತ್ಮಕ ವಿಡಿಯೋ ವೈರಲ್

ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಚಾಲಕರೊಬ್ಬರು ತಾನು ನಿವೃತ್ತಿಯಾಗುತ್ತಿರುವ ಮೊದಲು ತನ್ನ ಕೆಲಸದ ಕೊನೆಯ ದಿನದಂದು ಬಸ್ ಅನ್ನು ಅಪ್ಪಿ, ಚುಂಬಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಭಾವನಾತ್ಮಕ ವಿಡಿಯೋ ವೈರಲ್ ಆಗಿದೆ.

ಹೌದು, ಮಧುರೈನ 60 ವರ್ಷದ ಚಾಲಕ ಮುತ್ತುಪಾಂಡಿ ಅವರು ಬಸ್‌ನ ಸ್ಟೀರಿಂಗ್ ಚಕ್ರಕ್ಕೆ ಮುತ್ತಿಟ್ಟು ಕಣ್ಣೀರು ಸುರಿಸಿದ್ದಾರೆ. ಮೂರು ದಶಕಗಳಿಂದ ತಾವು ಮಾಡಿದ ಕೆಲಸಕ್ಕೆ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ.

ಮುತ್ತುಪಾಂಡಿ ಅವರು ಮಧುರೈನ ಅನುಪಾನಡಿ-ತಿರುಪರಂಗುನ್ರಂ-ಮಹಾಲಕ್ಷ್ಮಿ ಕಾಲೋನಿ ಮಾರ್ಗದಲ್ಲಿ ಬಸ್ ಚಲಾಯಿಸಿದ್ದಾರೆ. ತಮ್ಮ ಕೊನೆಯ ಚಾಲನೆಯಲ್ಲಿ ಚಾಲಕ ಮುತ್ತುಪಾಂಡಿ ಸ್ಟೀರಿಂಗ್ ಗೆ ಕೈ ಮುಗಿದು ನಮಸ್ಕರಿಸಿ, ಚುಂಬಿಸಿದ್ದಾರೆ.

ಈ ವೃತ್ತಿಯು ಸಮಾಜದಲ್ಲಿ ನನಗೆ ಗೌರವವನ್ನು ತಂದುಕೊಟ್ಟಿತು. ನನ್ನ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಮತ್ತು ನನ್ನ ಹೆತ್ತವರು ಮತ್ತು ಹೆಂಡತಿಯನ್ನು ನೋಡಿಕೊಳ್ಳಲು ಸಾಧ್ಯವಾಯಿತು ಎಂದು ಮುತ್ತುಪಾಂಡಿ ಭಾವುಕರಾಗಿ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...