ತಮಿಳುನಾಡಿನ ತಿರುವಳ್ಳೂರಿನಲ್ಲಿ ಆದಿ ಹಬ್ಬದ ಸಂಭ್ರಮಾಚರಣೆ ವೇಳೆ 7 ವರ್ಷದ ಬಾಲಕ ಕೆಂಡದ ಮೇಲೆ ಓಡುವಾಗ ಕಾಲು ಜಾರಿ ಬಿದ್ದಿದ್ದಾನೆ. ಹಬ್ಬದ ಆಚರಣೆಯ ಸಮಯದಲ್ಲಿ ಬಾಲಕನಿಗೆ ಕೆಂಡದ ಮೇಲೆ ನಡೆಯಲು ಒತ್ತಾಯಿಸಲಾಯಿತು. ಕೆಂಡದ ಮೇಲೆ ಬಿದ್ದ ಬಾಲಕನನ್ನು ತಕ್ಷಣ ರಕ್ಷಣಾಪಡೆ ರಕ್ಷಿಸಿದೆಯಾದ್ರೂ ಆತನ ದೇಹದ ಕೆಲ ಭಾಗ ಸುಟ್ಟಿದೆ. ಪ್ರಸ್ತುತ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆದಿ ಹಬ್ಬವು ಸಾಂಪ್ರದಾಯಿಕ ತಮಿಳು ಹಬ್ಬವಾಗಿದ್ದು, ವಿವಿಧ ದೇವತೆಗಳನ್ನು ಗೌರವಿಸಲು ಮತ್ತು ಪೂಜಿಸಲು ಆಚರಿಸಲಾಗುತ್ತದೆ. ಎಕ್ಸ್ ನಲ್ಲಿ ಇದ್ರ ವಿಡಿಯೋ ವೈರಲ್ ಆಗಿದೆ.
ಬಾಲಕ ಕೆಂಡದ ಮೇಲೆ ನಡೆಯಲು ಭಯಪಡುತ್ತಾನೆ. ಅಲ್ಲಿ ನೆರೆದಿದ್ದವರು ಆತನಿಗೆ ಒತ್ತಾಯ ಮಾಡ್ತಿದ್ದಾರೆ. ನಂತ್ರ ಬಾಲಕ ಇನ್ನೊಬ್ಬನ ಕೈ ಹಿಡಿದು ಕೆಂಡದಾಟುವ ಪ್ರಯತ್ನ ಮಾಡ್ತಾನೆ. ಆದ್ರೆ ಬಾಲಕ ಹಾಗೂ ಆತ ಇಬ್ಬರೂ ಕೆಂಡದ ಮೇಲೆ ಬೀಳ್ತಾರೆ. ತಕ್ಷಣ ಆತನನ್ನು ಎತ್ತಲಾಗಿದೆ. ಇಂಥ ಸಮಾರಂಭವನ್ನು ಬ್ಯಾನ್ ಮಾಡ್ಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಕೂಗು ಕೇಳಿ ಬಂದಿದೆ.