alex Certify CAA ವಿರುದ್ಧ ನಿರ್ಣಯ ಅಂಗೀಕರಿಸಿದ ರಾಜ್ಯಗಳ ಸಾಲಿಗೆ ತಮಿಳುನಾಡು ಸೇರ್ಪಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

CAA ವಿರುದ್ಧ ನಿರ್ಣಯ ಅಂಗೀಕರಿಸಿದ ರಾಜ್ಯಗಳ ಸಾಲಿಗೆ ತಮಿಳುನಾಡು ಸೇರ್ಪಡೆ

ಬಿಜೆಪಿ ಪ್ರತಿಭಟನೆಯ ಹೊರತಾಗಿಯೂ ತಮಿಳುನಾಡು ವಿಧಾನಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ನಿರ್ಣಯವನ್ನು ಅಂಗೀಕರಿಸಲಾಗಿದೆ. ಸಿಎಎ ಸಂವಿಧಾನದ ಜಾತ್ಯಾತೀತ ತತ್ವಗಳಿಗೆ ವಿರೋಧವಾಗಿದೆ. ಹಾಗೂ ದೇಶದಲ್ಲಿ ಧಾರ್ಮಿಕ ಸಾಮರಸ್ಯ ತರಲು ಇದು ಪೂರಕವಾಗಿಲ್ಲ ಎಂಧು ಹೇಳುವ ಮೂಲಕ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್​ ತಮ್ಮ ನಿರ್ಣಯವನ್ನು ಮಂಡಿಸಿದರು.

ದೇಶದ ಆಡಳಿತವು ಪ್ರಜೆಗಳ ಆಲೋಚನೆ ಹಾಗೂ ಭಾವನೆಗಳನ್ನು ಗೌರವಿಸುವಂತೆ ಇರಬೇಕು ಎಂದು ಪ್ರಜಾಪ್ರಭುತ್ವ ಹೇಳುತ್ತದೆ. ಆದರೆ ಪೌರತ್ವ ತಿದ್ದುಪಡೆ ಕಾಯ್ದೆಯು ನಿರಾಶ್ರಿತರಿಗೆ ಆಶ್ರಯ ನೀಡುವ ಬದಲು ಧರ್ಮ ಹಾಗೂ ದೇಶದ ಮೂಲ ಎಂಬ ಹೆಸರಿನಲ್ಲಿ ಅವರಿಗೆ ತಾರತಮ್ಯ ಮಾಡುತ್ತಿದೆ ಎಂದು ಸ್ಟಾಲಿನ್​ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯು ಶ್ರೀಲಂಕಾ ತಮಿಳಿಗರಿಗೆ ಇಲ್ಲಿನ ಪೌರತ್ವ ಪಡೆಯುವ ಸಾಧ್ಯತೆಯನ್ನೂ ಕಸಿದುಕೊಳ್ತಿದೆ ಎಂದು ಸ್ಟಾಲಿನ್​ ಹೇಳಿದ್ದಾರೆ. ಈ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಸದನದಲ್ಲಿ ನಿರ್ಣಯ ಅಂಗೀಕರಿಸಿದ ರಾಜ್ಯಗಳ ಸಾಲಿಗೆ ತಮಿಳುನಾಡು ಕೂಡ ಸೇರ್ಪಡೆಯಾಗಿದೆ. ಈ ಹಿಂದೆ ಪಶ್ಚಿಮ ಬಂಗಾಳ, ಕೇರಳ, ಪಂಜಾಬ್​, ರಾಜಸ್ಥಾನ ಹಾಗೂ ಮಧ್ಯ ಪ್ರದೇಶ(ಪ್ರಸ್ತುತ ಬಿಜೆಪಿ ಆಡಳಿತ) ಸಿಎಎ ವಿರುದ್ಧ ನಿರ್ಣಯವನ್ನು ಅಂಗೀಕರಿಸಿವೆ.

ಈ ನಡುವೆ ಸ್ಟಾಲಿನ್​ ಸರ್ಕಾರ ನಿರ್ಣಯವನ್ನು ಖಂಡಿಸಿ ಬಿಜೆಪಿ ಸದನದಿಂದ ಹೊರನಡೆದಿದೆ. ತಮಿಳುನಾಡು ವಿಧಾನಸಭೆಯ ಬಿಜೆಪಿ ನಾಯಕ ನೈನಾರ್​ ನಾಗೇಂದ್ರನ್​ ಈ ವಿಚಾರವಾಗಿ ಮಾತನಾಡಿದ್ದು, ಸಿಎಎ ಭಾರತೀಯ ಮುಸ್ಲಿಮರ ವಿರುದ್ಧ ಕಾಯ್ದೆಯಲ್ಲ. ನಾವು ಈಗಲೂ ವಿವಿಧತೆಯಲ್ಲಿ ಏಕತೆ ಎಂಬ ಮಾತಿನಲ್ಲಿಯೇ ನಂಬಿಕೆ ಹೊಂದಿದ್ದೇವೆ. ಆದರೆ ಪಾಕ್​ ಸ್ವಾತಂತ್ರ್ಯವನ್ನು ಪಡೆದ ಸಂದರ್ಭದಲ್ಲಿ ಹಿಂದೂಗಳ ಶೇಕಡಾವಾರು ಪ್ರಮಾಣ 20ರಷ್ಟಿದೆ ಆದರೆ ಅದು ಈಗ ಕೇವಲ 3 ಪ್ರತಿಶತವಾಗಿದೆ ಎಂದು ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...