ಚೆನ್ನೈ: ತಮಿಳುನಾಡು ಸರ್ಕಾರವು 5 ವರ್ಷದೊಳಗಿನ ಮಕ್ಕಳಿಗೆ ಸರ್ಕಾರಿ ಸಾರಿಗೆ ಸಂಸ್ಥೆಗಳ ಎಲ್ಲಾ ರೀತಿಯ ಬಸ್ ಗಳಲ್ಲಿ ಶುಲ್ಕ ರಹಿತ ಪ್ರಯಾಣವನ್ನು ಗುರುವಾರ ಘೋಷಿಸಿದೆ.
ತಮ್ಮ ಇಲಾಖೆಯ ಹೊಸ ಉಪಕ್ರಮಗಳ(2022-23) ಕುರಿತು ವಿಧಾನಸಭೆಯಲ್ಲಿ ಘೋಷಣೆಗಳನ್ನು ಮಾಡಿದ ಸಾರಿಗೆ ಸಚಿವ ಎಸ್.ಎಸ್. ಶಿವಶಂಕರ್, 5 ವರ್ಷದೊಳಗಿನ ಮಕ್ಕಳಿಗೆ ಸರ್ಕಾರಿ ಸಾರಿಗೆ ನಿಗಮಗಳು ನಡೆಸುವ ಎಲ್ಲಾ ರೀತಿಯ ಬಸ್‌ಗಳಲ್ಲಿ ಶುಲ್ಕವಿಲ್ಲದೆ ಪ್ರಯಾಣಿಸಲು ಅನುಮತಿಸಲಾಗುವುದು ಎಂದು ಹೇಳಿದರು.
ಪ್ರಸ್ತುತ, 3 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ, ‘ಅರ್ಧ-ಶುಲ್ಕ'(ವಯಸ್ಕ ಪ್ರಯಾಣಿಕರಿಂದ ಸಂಗ್ರಹಿಸುವ ಶುಲ್ಕದ ಅರ್ಧದಷ್ಟು) ವ್ಯವಸ್ಥೆ ಇದೆ.
ಆದಾಯವನ್ನು ಹೆಚ್ಚಿಸಲು, ದೂರದ ಬಸ್‌ಗಳಲ್ಲಿ ಲಗೇಜ್ ಜಾಗದ ಒಂದು ಭಾಗವನ್ನು ಪಾರ್ಸೆಲ್ ಮತ್ತು ಕೊರಿಯರ್ ಸೇವೆಗಳಿಗೆ ಪ್ರಾಯೋಗಿಕ ಆಧಾರದ ಮೇಲೆ ಶುಲ್ಕಕ್ಕೆ ನೀಡಲಾಗುವುದು ಎಂದು ಅವರು ಹೇಳಿದರು.