alex Certify ಮಾತ್ರೆ ತಗೋ ಎಂದ ಅಪ್ಪನನ್ನೇ ಕೊಂದ ಪಾಪಿ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾತ್ರೆ ತಗೋ ಎಂದ ಅಪ್ಪನನ್ನೇ ಕೊಂದ ಪಾಪಿ ಪುತ್ರ

ತಮಿಳುನಾಡಿನ ಟುಟಿಕೊರಿನ್ ಜಿಲ್ಲೆಯಲ್ಲಿ ನಡೆದ ಅಘಾತಕಾರಿ ಘಟನೆಯಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಯುವಕನೊಬ್ಬ ತಂದೆಯನ್ನೇ ಕೊಲೆ ಮಾಡಿದ್ದಾನೆ.

ಮೋಹನ್ ರಾಜ್(73) ಮೃತಪಟ್ಟ ವ್ಯಕ್ತಿ. ಆತನ 23 ವರ್ಷದ ಮಗ ಪುರುಷೋತ್ತಮ್ ಮಾರಕಾಸ್ತ್ರದಿಂದ ತಂದೆಯನ್ನು ಹೊಡೆದು ಕೊಲೆ ಮಾಡಿದ್ದಾನೆ. ಮೋಹರ್ ರಾಜ್ ಮೊದಲ ಪತ್ನಿಯಿಂದ ದೂರವಾದ ನಂತರ ಆನಂದಿ ಎಂಬುವರನ್ನು ಮದುವೆಯಾಗಿದ್ದು ಈ ದಂಪತಿಯ ಮಗನಾದ ಪುರುಷೋತ್ತಮ್ ಡಿಪ್ಲೋಮಾ ಓದಿದ ನಂತರ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ.

ಮಧುರೈ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ. ಮನೆಯಲ್ಲಿ ಔಷಧ ತೆಗೆದುಕೊಳ್ಳದ ಕಾರಣ ತಂದೆ ಮಾತ್ರೆ ತೆಗೆದುಕೊಳ್ಳುವಂತೆ ಒತ್ತಾಯಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು ಆರೋಪಿ ಮಾರಕಾಸ್ತ್ರದಿಂದ ತಂದೆಯ ತಲೆ, ಮುಖಕ್ಕೆ ಹೊಡೆದು ಕೊಲೆ ಮಾಡಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...