ದಿಂಡಿಗಲ್: ಇಬ್ಬರು ಯುವಕರು ಯುವತಿಯೊಬ್ಬಳ ಆತ್ಮೀಯ ಕ್ಷಣದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದ್ದು, ಆಕೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯುವತಿನಿಲಕೊಟ್ಟೈ ಸಮೀಪದ ಹಳ್ಳಿಯವಳಾಗಿದ್ದು, ದಿಂಡಿಗಲ್ ಸಮೀಪದ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಾಳೆ. ಆಕೆ ಮತ್ತು ಸತೀಶ್ (20) ಎಂಬ ವಿದ್ಯಾರ್ಥಿ ಪ್ರೀತಿಸುತ್ತಿದ್ದರು. ಆತನೊಂದಿಗೆ ತನ್ನ ಆತ್ಮೀಯ ಫೋಟೋಗಳನ್ನು ಹಂಚಿಕೊಂಡಿದ್ದಳು.
ಕೊರೋನಾ ಲಾಕ್ ಡೌನ್ ಸಮಯದಲ್ಲಿ, ಅವಳು ಸಾಮಾಜಿಕ ಮಾಧ್ಯಮದ ಮೂಲಕ ಅರುಣ ಎಂಬುವನೊಂದಿಗೆ ಸಂಪರ್ಕ ಹೊಂದಿದ್ದಳು. ಅವಳು ಅವನನ್ನು ಇಷ್ಟಪಡಲು ಪ್ರಾರಂಭಿಸಿದ್ದಲ್ಲದೇ, ಆತ್ಮೀಯ ಫೋಟೋಗಳನ್ನು ಕಳುಹಿಸಿದ್ದಾಳೆ.
ಏತನ್ಮಧ್ಯೆ, ಅರುಣ್ ಮತ್ತು ಸತೀಶ್ ಪರಸ್ಪರ ಸಂಪರ್ಕಕ್ಕೆ ಬಂದಿದ್ದು, ವಿದ್ಯಾರ್ಥಿನಿ ಇಬ್ಬರೊಂದಿಗೂ ಗೆಳೆತನ ಹೊಂದಿರುವುದು ಗೊತ್ತಾಗಿದೆ. ಈ ವಿಚಾರ ಮೂವರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಇಬ್ಬರು ಯುವಕರು ಆಕೆಯ ಆತ್ಮೀಯ ಕ್ಷಣದ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಅವು ವೈರಲ್ ಆಗಿದ್ದು, ಇದು ಗಮನಕ್ಕೆ ಬಂದ ನಂತರ ಕಾಲೇಜು ವಿದ್ಯಾರ್ಥಿನಿ ದೂರಿನೊಂದಿಗೆ ನೀಲಕೊಟ್ಟೈ ಮಹಿಳಾ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾಳೆ.
ಆಕೆಯ ದೂರಿನ ಆಧಾರದ ಮೇಲೆ, ಪೊಲೀಸರು ಅರುಣ್, ಸತೀಶ್ ಮತ್ತು ಇತರ ಇಬ್ಬರ ವಿರುದ್ಧ ಕೇಸ್ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.